ಕಾರವಾರ: ಕಳೆದ ಕೆಲವು ದಿನಗಳಿಂದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಎಲ್ಲವೂ ಸರಿ ಇಲ್ಲ ಎಂದೇ ಬಿಂಬಿತವಾಗುತ್ತಿದೆ. ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪನೆ ಮಾಡುತ್ತಾರೆ ಎಂಬ ಮಾತಿದೆ. ರಾಜಕೀಯ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಇದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ರೆಡ್ಡಿ ಅವರ ಮೊಮ್ಮಗಳ ನಾಮಕರಣ ಹಾಗೂ ಹನಿಮಮಾಲಾ ಕಾರ್ಯಕ್ರಮಕ್ಕೆ ಶ್ರೀರಾಮುಲು ಚಕ್ಕರ್ ಹಾಕಿದ್ದರು.
ಇದೀಗ ಶ್ರೀರಾಮುಲು ಅವರು ಸ್ನೇಹಾನಾ..? ರಾಜಕಾರಣವಾ..? ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಾನು ಮೊದಲಿನಿಂದಾನು ಸ್ನೇಹಕ್ಕೆ ಬೆಲೆ ಕೊಟ್ಟ ವ್ಯಕ್ತಿ. ಜನಾರ್ದನ ರೆಡ್ಡಿ ಅವರ ಸ್ನೇಹಾ, ರಾಜಕೀಯ ಹೊರತು. ಪಕ್ಷ ನನಗೆ ತಾಯಿ ಸಮಾನ. ಹೀಗಾಗಿ ಪಕ್ಷ ಹಾಗೂ ಸ್ನೇಹವನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತೇನೆ.
ಬಿಜೆಪಿ ಮೊದಲಿನಿಂದಲೂ ಶಿಸ್ತಿನ ಪಾಠ ಕಲಿಸಿಕೊಟ್ಟಿದೆ. ನಾನು ಸ್ನೇಹಕ್ಕೆ ಯಾವಾಗಲೂ ಚಿರೃಣಿಯಾಗಿರುತ್ತೇನೆ. ಪಕ್ಷ ನನ್ನ ತಾಯಿಗೆ ಸಮ. ಅದನ್ನು ಯಾವತ್ತು ಬಿಟ್ಟುಕೊಡುವುದಿಲ್ಲ. ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಾರೆ ಎಂದಿದ್ದಾರೆ.