ಸುದ್ದಿಒನ್, ಚಿತ್ರದುರ್ಗ : ಚಿತ್ರದುರ್ಗ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಕರ್ಮಭೂಮಿಯನ್ನಾಗಿಸಿಕೊಂಡು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ, ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಚಿತ್ರದುರ್ಗ ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರಬಲ ಅಕಾಂಕ್ಷಿ ವಿನೋದ್ ಶಿವರಾಜ್ ಹೇಳಿದರು.
ನಗರದ ದುರ್ಗದ ಸಿರಿ ಹೋಟೆಲ್ ನಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ ಚಿತ್ರದುರ್ಗ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ 2024 ಅಂಗವಾಗಿ ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಎನ್. ಪಿ.ಎಸ್. ಇಂದ ಒ. ಪಿ. ಎಸ್. ಯೋಜನೆಯನ್ನು ಜಾರಿಗೊಳಿಸುವುದು. ಸಮಾನ ಕೆಲಸಕ್ಕೆ ಸಮಾನ ವೇತನದಡಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸಮಾನ ವೇತನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವುದರ ಮೂಲಕ ಶಿಕ್ಷಕರ ಹಲವಾರು ಬೇಡಿಕೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಅವರ ಏಳಿಗೆಗಾಗಿ
ಅವಿರತವಾಗಿ ದುಡಿಯುತ್ತೇನೆಂದರು.
ಕಾರ್ಯಕ್ರಮದ ನಿರೂಪಣೆಯನ್ನು ಡಾ. ಯಶೋಧರ, ವ್ಯಕ್ತಿ ಪರಿಚಯವನ್ನು ರಮಣಗೌಡ, ಸ್ವಾಗತ ಭಾಷಣವನ್ನು ವಿಜಯ್ ಕುಮಾರ್ ಮತ್ತು ವಂದನಾರ್ಪಣೆಯನ್ನು ಸೀತಾರಾಮರೆಡ್ಡಿ ಪಿ. ಜೆ. ನಡೆಸಿಕೊಟ್ಟರು.