ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಮಾ. 31 : ನಾನು ಕಷ್ಟದಿಂದ ಬಂದ ವ್ಯಕ್ತಿ ನನಗೆ ಬಡತನ ಏನೆಂದು ಗೊತ್ತಿದೆ.ನಿನ್ನಂತೆ ಬಂಗಾರದ ಚಮಚ ಇಟ್ಟುಕೊಂಡು ಬಂದವನಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರಿಂದ ಮತದಾರರು ಐದು ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹೇಳಿದರು.
ಅವರು ಚಿತ್ರದುರ್ಗದ ಅವರ ನಿವಾಸದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.ನಾನು ನಿನ್ನ ಹೆಸರನ್ನು ಹೇಳದೆ ಸಾಮಾನ್ಯವಾಗಿ ಮಾತಾಡಿದ್ದೆ, ಆದರೆ ಕುಂಬಳಕಾಯಿ ಕಳ್ಳ ಎಂದರೆ ನಿನ್ಯಾಕೆ ಹೆಗಲು ಮುಟ್ಟಿಕೊಂಡು ನೋಡ್ತಿಯ, ನಿನ್ನೆ ಪತ್ರಿಕಾ ಗೋಷ್ಠಿಯಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಗಳನ್ನು ಮಾಡಿದ್ದಿಯಾ, ನಾನು ನಿಜವಾಗಿಯೂ ಬಡತನದಿಂದಲೇ ಬಂದಿದ್ದು, ಸೊಸೈಟಿಯಲ್ಲಿ ಅಕ್ಕಿ ಸೀಮೆಣ್ಣೆ ಮಾರಿ ಜೀವನ ಮಾಡಿದ್ದೇನೆ. ನಿನ್ನ ಹಾಗೆ ಕರೆಂಟ್ ಕಳವು ಮಾಡಿ ಬದುಕು ಸಾಗಿಸಿಲ್ಲ. ಎಷ್ಟೋ ಜನ ಬಡತನದಲ್ಲಿದ್ದವರು, ರಾಜಕೀಯಕ್ಕೆ ಬಂದು ದೊಡ್ಡವರಾಗಿದ್ದಾರೆ. ಕಾಂಗ್ರೆಸ್ ಪಕ್ಷ ನಿನಗೆ ಟಿಕೆಟ್ ಕೊಡದಿದ್ದರಿಂದ ಪಕ್ಷೇತರನಾಗಿ ನಿಂತು ಗೆದ್ದಿದ್ದಿಯಾ ಅಂದರೆ ಅಲ್ಲಿಯೂ ಸಹ ನಿನ್ನ ಯೋಗ್ಯತೆ ಗೊತ್ತಾಗಿದೆ ಎಂದರು.
ಜಿಲ್ಲೆಯಲ್ಲಿ ನಾನು ಎಲ್ಲೆ ಹೋದರೂ ಇತರೇ ರಾಜಕೀಯ ಪಕ್ಷದವರು ಕರೆದು ಟಿಕೆಟ್ ನೀಡುತ್ತಾರೆ. ನಿನಗೆ ಆ ಯೋಗ್ಯತೆ ಇಲ್ಲ. ಕಳೆದ ಚುನಾವಣೆಯಲ್ಲಿ 90 ಸಾವಿರ ಮತದಾರರು ನಿನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಉತ್ತಮ ಕಾಮಗಾರಿಗಳನ್ನು ಮಾಡಿದ್ದೇನೆ. ಈಗಲು ಅಲ್ಲಿನ ಜನ ನನ್ನನ್ನು ನೆನೆಸುತ್ತಾರೆ.ಆದರೆ ನಿನ್ನ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ಮಾಡಿ ಅದನ್ನು ಒಡೆಯುವಂತೆ ಮಾಡಲಾಗಿದೆ. ಗುತ್ತಿಗೆದಾರರಿಂದ ಕಮಿಷನ್ ಪಡೆದು ಕ್ಷೇತ್ರದ ಮತದಾರರಿಗೆ ಮೋಸ ಮಾಡಿದ್ದಿಯಾ, ಹೊಳಲ್ಕೆರೆ ಕ್ಷೇತ್ರದಲ್ಲಿ ನೀನುಸತ್ತರೆ ನಿನ್ನ ಹೊರಲು ನಾಲ್ಕು ಜನ ಬರುವುದಿಲ್ಲ,ನನ್ನ ಮಗ ಯಾವಾಗಲೂ ಪೋತಪ್ಪ ನಾಯಕನೇ ಅವನಿಗಾಗಿ ಯಡಿಯೂರಪ್ಪ ಬಳಿ ಟಿಕೆಟ್ ಕೇಳಿದ್ದು ತಪ್ಪಾ? ನಿನ್ನನ್ನು ಯಡಿಯೂರಪ್ಪನವರು ಮಂತ್ರಿ ಮಾಡಲಿಲ್ಲ ಎಂದು ಕ್ಷೇತ್ರದಲ್ಲಿ ಅವರ ವಿರುದ್ಧ ದಿಕ್ಕಾರಗಳನ್ನು ಕೂಗಿ ಟಯರ್ ಗಳನ್ನು ಸುಡಿಸಿದ್ದು ಇನ್ನು ಮರೆತಿಲ್ಲ ಎಂದು ಚಂದ್ರಪ್ಪ ತಿಪ್ಪಾರೆಡ್ಡಿಯ ವಿರುದ್ದ ಕಿಡಿ ಕಾರಿದರು.
ಚಿತ್ರದುರ್ಗ ಸಾರಿಗೆ ಶೌಚಾಲಯದಲ್ಲೂ ಸಹ ಪರ್ಸೆಂಟೇಜ್ ಪಡೆಯುತ್ತಿಯಾ ಎಂದರೆ ನಿನ್ನ ಯೋಗ್ಯತೆ ಏನೆಂದು ಗೊತ್ತಾಗುತ್ತದೆ. ನಾನು ಐದು ಬಾರಿ ಶಾಸಕನಾಗಿದ್ದೇನೆ. ನಿನ್ನಷ್ಟೆ ಅರ್ಹತೆ ನನಗೂ ಇದೆ. ನಿನಗೆ ನಾನು ನಿನಗೆ ಅಣ್ಣನ ಸ್ಥಾನ ನೀಡಿದ್ದೆ, ನಿನ್ನ ಹೆಸರು ಹೇಳದೆ ಮಾತಾಡಿದ್ದೆ , ಆದರೆ ನೀನು ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಿಯಾ ಇದಕ್ಕೆತಕ್ಕ ಪ್ರತಿಫಲ ಮುಂದಿನ ದಿನಗಳಲ್ಲಿ ದೊರೆಯಲಿದೆ. ರೆಡ್ಡಿ ಸಮುದಾಯದಲ್ಲಿ ಜನಿಸಿದ ನೀನು ಸಂಘಟಿಸುವ ಬದಲಿಗೆ ಹೊಡೆಯುವ ಕೆಲಸ ಮಾಡುತ್ತಿದ್ದಿಯಾ, ಇದೇ ರೀತಿ ಬಿಜೆಪಿ ಪಕ್ಷ ಹೊಡೆಯುವ ಸಂಚು ಮಾಡಿದ್ದೀಯಾ ಎಂದು ದೂರಿದರು.ಮುಂದಿನ ದಿನಗಳಲ್ಲಿ ನೀನು ನನ್ನ ತಂಟೆಗೆ ಬರಬೇಡ, ನಾನು ಬರುವುದಿಲ್ಲ. ಹಾಗೇನಾದರು ಬಂದರೆ ನಿನ್ನ ಜಾತಕ ಬಿಚ್ಚಿಡುತ್ತೇನೆ ಎಂದು ಚಂದ್ರಪ್ಪ ದೂರಿದರು.
ಪ್ರಜಾಪ್ರಭುತ್ವದಲ್ಲಿ ಯಾವುದೂ ದೊಡ್ಡದಿಲ್ಲ. ಯಾರು ಬೇಕಾದರೂ ಸ್ಪರ್ಧಿಬಹುದು, ಮತದಾರರು ನಿನ್ನ ಆಳುಗಳಲ್ಲ, ನಿನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಸೋಲಿಸಿದ್ದಾರೆ. ನನ್ನ ನೋವನ್ನು ನನ್ನ ಅಭಿಮಾನಿಗಳಮುಂದೆ ತೋಡಿಕೊಂಡಿದ್ದೇನೆ. ಇದನ್ನು ಕೇಳುವ ಹಕ್ಕು ನಿನಗಿಲ್ಲ. ಮುಂದಿನ ದಿನಗಳಲ್ಲಿ ಉತ್ತಮನಾಗಿ ಬಾಳು ಎಂದ ಅವರು ಎಂಎಲ್‍ಸಿ ನವೀನ್ ಬಗ್ಗೆ ಮಾತಾಡಿ, ಹೂಸದುರ್ಗ ವಿಧಾನಸಭಾ ಚುನಾವಣೆಯಲ್ಲಿ ಲಿಂಗಮೂರ್ತಿಗೆ ಟಿಕೆಟ್ ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರೆ ನೀನು ಆತನ ಹತ್ತಿರ ಹಣವಿಲ್ಲ ಜನ ಬೆಂಬಲವಿಲ್ಲ ಟಿಕೆಟ್ ಕೊಡಬೇಡಿ ಎಂದು ನೇರವಾಗಿ ಹೇಳುವ ಮೂಲಕ ಟಿಕೆಟ್ ತಪ್ಪಿಸಿದ್ದಿಯಾ, ನಿನ್ನ ತಾಯಿ ತಾಲೂಕು ಪಂಚಾಯಿತಿ ಸದಸ್ಯರಾಗಿದ್ದಾಗ ಅದಕ್ಕೆ ಉಮಾಪತಿ ಕಾರಣ. ಇದನ್ನು ಮರೆಯದೆ ಆತನ ಫೋಟೋವನ್ನು ಮನೆಯಲ್ಲಿ ಹಾಕಿಕೊ. ಇದಲ್ಲದೆ ರಾಜಕೀಯವಾಗಿ ಶಕ್ತಿ ತುಂಬಿದ್ದು ಉಮಾಪತಿಯೇ, ನಿನ್ನ ಚುನಾವಣೆಯಲ್ಲಿ ಹೆಚ್ಚು ಶ್ರಮ ಹಾಕಿದ್ದೆ ಅದನ್ನು ಮರೆಯಬೇಡ, ನಾನು ನನ್ನ ಮಗನ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಮನೆಗೆ ಭೇಟಿ ಮಾಡಿದ್ದು, ಸಂಧಾನಕ್ಕೆ ಪ್ರಯತ್ನ ನಡೆಸಿದ್ದಾರೆ. ಆದರೆ ನಾವು ಯಾವುದಕ್ಕೂ ಬಗ್ಗಿಲ್ಲ. ನಮ್ಮ ಪಾಲಿನ ಹಕ್ಕನ್ನು ಕೇಳಿದ್ದೇವೆ. ಏಪ್ರಿಲ್ 3 ರಂದು ಪಕ್ಷೇತರರಾಗಿ ನನ್ನ ಪುತ್ರ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲಿದ್ದಾನೆ. ಕ್ಷೇತ್ರವನ್ನು ಸುತ್ತಾಡಿರುವ ರಘುಚಂದನ್‍ಗೆ ಎಲ್ಲಾ ಸಮಾಜದವರು ಬೆಂಬಲವನ್ನು ಸೂಚಿಸಿದ್ದಾರೆ.
ಇದೇ ಸಮಯದಲ್ಲಿ ನಗರಸಭಾ ಸದಸ್ಯರಾದ ಬಾಸ್ಕರ್, ಇಪ್ಕೋದ ಸಂಜೀವ್ ಕುಮಾರ್, ಅಡಿಕೆ ಉದ್ಯಮಿ ಲವ ಕುಮಾರ್, ಬೋವಿ ಸಮಾಜದ ಮುಖಂಡ ಮೋಹನ್ , ಬಿಜೆಪಿಯ ರತ್ಮಮ್ಮ, ಮಂಡಲ ಅಧ್ಯಕ್ಷ ಸಿದ್ದೇಶ, ಜಿಪಂ ಮಾಜಿ ಸದಸ್ಯರಾದ ಮಹೇಶ್, ತಿಪ್ಪೇಸ್ವಾಮಿ, ಮುಖಂಡರಾದ ಬಸವರಾಜ್, ಮುರುಗೇಶ್, ಈಶಣ್ಣ,ಮಹಂತೇಶ್, ಬಸವಯ್ಯ, ಸಿದ್ದರಾಮಣ್ಣ ಸೇರಿದಂತೆ ಇತರರಿದ್ದರು.