ಮಗಳನ್ನೇ ಚುನಾವಣೆಗೆ ನಿಲ್ಲಿಸ್ತೀನಿ : ಕೆ.ಎನ್. ರಾಜಣ್ಣ

1 Min Read

ತುಮಕೂರು: ಕೆ.ಎನ್.ರಾಜಣ್ಣ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಅವರ ಮಗ ರಾಜೇಂದ್ರ ಕೂಡ ರಾಜಕಾರಣದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಮಗಳನ್ನು ರಾಜಕೀಯಕ್ಕೆ ತರುವ ಯೋಚನೆ ಮಾಡ್ತಿದ್ದಾರೆ.ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ರಾಜಣ್ಣ, ಅವರ ಸಂಪುಟದಲ್ಲಿಯೇ ಸಹಕಾರಿ ಸಚಿವರಾಗಿದ್ದರು. ಆದ್ರೆ ಒಂದೇ ಒಂದು ಮಾತಿನಿಂದ ತಮ್ಮ ಸಚಿವ ಸ್ಥಾನಕ್ಕೆ ಕುತ್ತು ತಂದುಕೊಂಡರು. ಇದೀಗ ಮುಂದಿನ ಬಾರಿ ಮಹಿಳಾ ರಿಸರ್ವೇಶನ್ ಇದ್ದರೆ ನನ್ನ ಮಗಳು ರಶ್ಮಿ ರಾಜಣ್ಣರನ್ನ ಚುನಾವಣೆಗೆ ನಿಲ್ಲಿಸುತ್ತೇನೆ ಎಂದಿದ್ದಾರೆ.

ಕ್ರಾಂತಿಗಳ ಬಗ್ಗೆ ಹೆಚ್ಚು ಸದ್ದು ಮಾಡಿದ್ದವರು ರಾಜಣ್ಣ. ನವೆಂಬರ್ ಕ್ರಾಂತಿ, ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಹೇಳಿ ಸಾಕಷ್ಟು ಸಂಚಲನವನ್ನು ಮೂಡಿಸಿದ್ದರು. ಇದೀಗ ರಾಜಕಾರಣದಲ್ಲಿ ಬದಲಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೊಂದು ದಿನ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುತ್ರೆ ಎಂದುಕೊಂಡರೆ ಸುಳ್ಳು. ಸಿದ್ದರಾಮಯ್ಯ ಅವರು ಗಟ್ಟಿಯಾಗಿ ವಿಶ್ವಾಸದಲ್ಲಿದ್ದಾರೆ. ಬಜೆಟ್ ಮಂಡನೆ ಮಾಡ್ತಿದ್ದಾರೆ ಅಂದ್ರೆ ಅಷ್ಟು ಕಾನ್ಫಿಡೆನ್ಸ್ ಇದೆ ಅಂತ ಆಯ್ತಲ್ಲ. ಅಲ್ಲಿಗೆ ಯಥಾಸ್ಥಿತಿ ಅಂತಲೇ ಅರ್ಥ ಎಂದಿದ್ದಾರೆ.

ಇದೆ ವೇಳೆ ಶಾಸಕರೆಲ್ಲಾ ಫಾರಿನ್ ಟ್ರಿಪ್ ಹೋಗ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಹೋದಷ್ಟು‌ ಫಾರಿನ್ ಟ್ರಿಪ್ ಯಾರೂ ಹೋಗಲ್ಲ. ನಾನು ಜೊತೆಯಲ್ಲಿ ಕರೆದುಕೊಂಡು ಹೋಗಲ್ಲ. ಬಂದ ಮೇಲೂ ಹೇಳುವುದಿಲ್ಲ. ದಟ್ಸ್ ಮೈ ಸ್ಟೈಲ್. ಖಾಸಗಿ ಬದುಕಲ್ಲಿ ಯಾರಾದರೂ ಶಾಸಕರು ಸ್ವಂತ ಖರ್ಚಿನಲ್ಲಿ ಹೊರಗೆ ಹೋದರೆ, ಅದು ಸರಿಯಲ್ಲ ಅಂತ ಅವಹೇಳನ ಮಾಡುವ ಪದ್ಧತಿ ಯಾಕೆ ಬರ್ತಿದೆ..? ರಾಜಕೀಯ ಅರ್ಥವನ್ನ ಯಾವ ಯಾವ ರೀತಿ ಅರ್ಥೈಸ್ತೀರೋ ಗೊತ್ತಿಲ್ಲ. ಪಾಲಿಟಿಕ್ಸ್ ಪ್ರತಿಯೊಂದರಲ್ಲೂ ಇದ್ದೇ ಇರುತ್ತದೆ. ಸದುದ್ದೇಶದಿಂದ ಮಾಡುವ ವಿದೇಶ ಪ್ರವಾಸಕ್ಕೆ ಹೋಗಿ ಬರಲಿ, ಅದನ್ನು ತಪ್ಪು ಎನ್ನುವುದು ಸರಿಯಲ್ಲ ಎಂದಿದ್ದಾರೆ.

Share This Article
Enable Notifications OK No thanks