ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ, (ನ. 09) : ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ,
ಸ್ಥಳೀಯವಾಗಿ ಇರುವ ಯಾರಿಗಾದರೂ ಪಕ್ಷ ಟಿಕೇಟ್ ನೀಡಲಿ ನಾನು ಅವರಿಗೆ ಬೆಂಬಲ ನೀಡುವುದಾಗಿ ಎಂ.ಎಲ್.ಸಿ. ರಘು ಆಚಾರ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಕಾಂಗ್ರೇಸ್ ಕಛೇರಿಯಲ್ಲಿ ತಮ್ಮನ್ನು ಬೇಟಿಯಾದ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಎರಡು ಚುನಾವಣೆಯನ್ನು ಆಡಿದ್ದೇನೆ, ಮತದಾರರನ್ನು ನನ್ನನ್ನು ಒಪ್ಪಿಕೊಂಡು ಗೆಲ್ಲಿಸಿದ್ದಾರೆ. ಅದರಂತೆ ಅವರಿಗೆ ನನ್ನ ಕೈಲಾದ ಸಹಾಯವನ್ನು ಮಾಡಿದ್ದೇನೆ. ಇಷ್ಟು ಸಾಕು ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೇ ಮಾಡುವುದಿಲ್ಲ ಎಂದು ಈಗಾಗಲೇ ಪಕ್ಷದ ವರಿಷ್ಟರಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಈಗಾಗಲೇ ವಿಧಾನ ಪರಿಷತ್ ಸಾಕಾಗಿ ಹೋಗಿದೆ ಮುಂದೆ ಏನಿದ್ದರು ರಾಜ್ಯ ಸಭಾ ಅಥವಾ ಲೋಕಸಭೆಯಲ್ಲಿ ಪಕ್ಷದವತಿಯಿಂದ ಟೀಕೇಟ್ ಕೇಳುವುದಾಗಿ ತಿಳಿಸಿದ ರಘು ಆಚಾರ್, ವಿಧಾನ ಪರಿಷತ್‍ಗೆ ಸ್ಥಳೀಯವಾಗಿ ಇರುವಂತ ಭೀಮಸಮುದ್ರದ ಮಂಜುನಾಥ್, ಮಾಜಿ ಸಚಿವ ಅಂಜನೇಯ, ಅಥವಾ ಹನುಮಲಿ ಷಣ್ಮುಖಪ್ಪರವರಿಗೆ ನೀಡಲಿ ಇವರು ಸಹಾ ಪಕ್ಷದ ಕಾರ್ಯಕರ್ತರಾಗಿ ಇದ್ದಾರೆ ಎಂದರು.
ಈಗಾಗಲೇ ಒಮ್ಮೆ ಪಕ್ಷೇತರವಾಗಿ ಮತ್ತೋಮ್ಮೆ ಕಾಂಗ್ರೇಸ್ ಪಕ್ಷದವತಿಯಿಂದ ಸ್ಫರ್ಧೇ ಮಾಡಿ ಗೆಲುವು ಸಾಧಿಸಿದ್ದೇನೆ, ಈ ಬಾರಿ ಟೀಕೇಟ್ ಬೇಡ ಎಂದು ನಾನೇ ಹೇಳೀದ್ದೇನೆ, ಹಾಗಂತ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ, ನನ್ನ ರಾಜಕಾರಣ ಏನಿದ್ದರು ಚಿತ್ರದುರ್ಗ ದಾವಣಗೆರೆ ಜಿಲ್ಲೆಯಲ್ಲಿಯೇ ನಡೆಯಲಿದೆ ಇಲ್ಲಿ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ, ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದಲೂ ಸಹಾ ನನಗೆ ಆಫರ್ ಬಂದಿದೆ ಮೈಸೂರು, ಮಂಡ್ಯದಲ್ಲಿ ಸ್ಫರ್ಧೇ ಮಾಡುವಂತೆ ಹೇಳಿದ್ದಾರೆ ಇದರ ಬಗ್ಗೆ ನಾನು ತೆಲೆ ಕೆಡಿಸಿಕೊಂಡಿಲ್ಲ ಎಂದು ರಘು ಆಚಾರ್ ತಿಳಿಸಿದರು.