ಸುದ್ದಿಒನ್, ಹಿರಿಯೂರು, ಆಗಸ್ಟ್. 16 : ನಾನು ಯಾವುದೇ ಖಾತೆ ಬಯಸಿಲ್ಲ, ಆದರೆ ಸಹಕಾರ ಖಾತೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.
ತಾಲ್ಲೂಕಿನ ತಾಳವಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈಕಮಾಂಡ್ ಮುಂದೆ ಯಾರು ದೊಡ್ಡವರಲ್ಲ ಎಂದರು.
ಬಿಜೆಪಿಯವರು ಧರ್ಮಸ್ಥಳಕ್ಕೆ ಯಾತ್ರೆ ವಿಚಾರದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ಕಾರು ಅಥವಾ ಕಾಲ್ನಡಿಗೆಯಲ್ಲಾದರೂ ಹೋಗಲಿ, ಧರ್ಮಸ್ಥಳದಲ್ಲಿ ದೇವರು ಇದ್ದಾರೆ ಕೈಮುಗಿದು ಬರುತ್ತಾರೆ. ಬಿಜೆಪಿಯವರಿಗೂ ದೇವರು ಒಳ್ಳೆಯದು ಮಾಡ್ತಾನೆ. ಧರ್ಮಸ್ಥಳ ಪ್ರಕರಣ ಬಗ್ಗೆ ಸೋಮವಾರ ಗೃಹಸಚಿವರು ಉತ್ತರ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.




