ವೀಕ್ಷಿಸಿ: “ನಾನು ಮದುವೆಯಾಗುತ್ತೇನೆ” : ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ….!

ಸುದ್ದಿಒನ್ ನ್ಯೂಸ್ ಡೆಸ್ಕ್

ನವದೆಹಲಿ  : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ” ಸರಿಯಾದ ಹುಡುಗಿ ಸಿಕ್ಕರೆ  ಮದುವೆಯಾಗುತ್ತೇನೆ” ಎಂದು ಪಕ್ಷದ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂದರ್ಶನದಲ್ಲಿ ಹೇಳಿದ್ದಾರೆ.

52 ವರ್ಷದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ತಮ್ಮ ಮದುವೆಯ ಕುರಿತಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ.

ಕರ್ಲಿ ಟೇಲ್ಸ್‌ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ, ಮದುವೆ ವಿಚಾರವಾಗಿ ಉತ್ತರಿಸಿದ್ದಾರೆ.

ನೀವು ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದ್ದೀರಾ? ಎಂದು ಸಂದರ್ಶಕಿ ಕೇಳುತ್ತಾರೆ.

ರಾಹುಲ್ ಗಾಂಧಿ ಉತ್ತರ : “ಸರಿಯಾದ ಹುಡುಗಿ ಸಿಕ್ಕರೆ ನಾನು ಮದುವೆಯಾಗುತ್ತೇನೆ.” ಎಂದು ಉತ್ತರಿಸಿದ್ದಾರೆ.

ಹುಡುಗಿಯ ಆಯ್ಕೆಯ ಬಗ್ಗೆ ಏನಾದರೂ ಪಟ್ಟಿ ಮಾಡಿದ್ದೀರಾ ಎಂಬ ಪ್ರಶ್ನೆಗೆ ಇಲ್ಲ, ಹಾಗೇನಿಲ್ಲ, ಬುದ್ದಿವಂತ ಮತ್ತು ಪರಸ್ಪರ ಪ್ರೀತಿ ಹೊಂದಿದ್ದರೆ ಸಾಕು. ನೀವು ನನ್ನನ್ನು ತೊಂದರೆಗೆ ಸಿಲುಕಿಸುತ್ತೀರಿ ಎಂದು ನಗುತ್ತಾ ಜಾರಿಕೊಂಡರು.

ಡಿಸೆಂಬರ್‌ ನಲ್ಲಿ, ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾಗಾಂಧಿಯ ಬಗ್ಗೆಯೂ ಸಾಕಷ್ಟು ಮಾತನಾಡಿದ್ದಾರೆ.

129 ದಿನಗಳಲ್ಲಿ 12 ರಾಜ್ಯಗಳ ಮೂಲಕ ಪಾದಯಾತ್ರೆ ನಡೆಸಿದ ನಂತರ ಕಾಂಗ್ರೆಸ್ ನಾಯಕ ಪ್ರಸ್ತುತ ಜಮ್ಮುವಿನಲ್ಲಿದ್ದಾರೆ.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಜನವರಿ 30 ರಂದು ಶ್ರೀನಗರದಲ್ಲಿ ಕೊನೆಗೊಳ್ಳಲಿದೆ.

Share This Article
Leave a Comment

Leave a Reply

Your email address will not be published. Required fields are marked *