Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಿಗಮ ಮಂಡಳಿ ಪಟ್ಟಿ ಅಂತಿಮ ಮಾಡಿಕೊಂಡೇ ಬರುತ್ತೇನೆ : ಡಿಕೆ ಶಿವಕುಮಾರ್

Facebook
Twitter
Telegram
WhatsApp

 

ಸರ್ಕಾರದಲ್ಲಿ ಅಸಮಾಧಾನಿತರನ್ನು ಸಮಾಧಾನ ಮಾಡುವುದಕ್ಕೆ ನಿಗಮ ಮಂಡಳಿಯೂ ಒಂದು ದಾರಿಯೇ ಸರಿ. ಆದರೆ ಸರ್ಕಾರ ರಚನೆಯಾಗಿ ಹಲವು ತಿಂಗಳಾದರೂ ಇನ್ನು ನಿಗಮ ಮಂಡಳಿಗಳ ಪಟ್ಟಿ ಫೈನಲ್ ಆಗಿಲ್ಲ. ಇದಕ್ಕೆ ಕಾರಣ, ಸಿಎಂ ಹಾಗೂ ಡಿಸಿಎಂ ಆಪ್ತ ಬಳಗದವರಿಗೆ ಸ್ಥಾನ ಸಿಗಬೇಕು ಎಂಬ ಹಠ. ಆದರೆ ಇಂದು ಇದರ ಪಟ್ಟಿ ಫೈನಲ್ ಮಾಡಿಕೊಂಡೇ ಬರುತ್ತಾರೆ ಎನ್ನಲಾಗುತ್ತಿದೆ.

ಡಿಕೆ ಶಿವಕುಮಾರ್ ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಸಂಜೆ ವೇಳೆಗೆ ಸಿಎಂ ಪ್ರವಾಸವಾಗುತ್ತಾರೆ. ಈಗಿನ ಹಂತದಲ್ಲಿ ಶಾಸಕರಿಗೆ ಮಾತ್ರ ಸಿಗಬಹುದು ಎಂದು ಹೇಳಲಾಗುತ್ತಿದೆ. ಆರಂಭದಲ್ಲಿಯೇ ಹಲವು ಷರತ್ತುಗಳನ್ನು ಹಾಕಲಾಗಿದೆ. ಈಗ ಹೈಕಮಾಂಡ್ ಬಳಿ ಒಪ್ಪಿಗೆ ಪಡೆದುಕೊಳ್ಳಲಾಗುತ್ತಿದೆ. ಹೀಗಾಗಿ ಇಂದು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ದಾರೆ

ಅದಕ್ಕೂ ಮುನ್ನ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಈಗಾಗಲೇ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಕಳುಹಿಸಿದ್ದೇವೆ. ಈಗ ನಿಗಮ ಮಂಡಳಿ ಪಟ್ಟಿ ಫೈನಲ್ ಮಾಡಿಕೊಂಡೆ ಬರುತ್ತೇವೆ. ದೆಹಲಿ, ನಾಗಪುರದಲ್ಲಿ ನಡೆಯುವ CWC ಸಭೆಯಲ್ಲಿ ಬಾಗವಹಿಸುತ್ತೇವೆ ಎಂದು ದೆಹಲಿ ಪ್ರವಾಸದ ಬಗ್ಗೆ ತಿಳಿಸಿದ್ದಾರೆ.

ಇನ್ನು ನಿಗಮ ಮಂಡಳಿಗಳ ಸ್ಥಾನ ಪಡೆಯುವುದಕ್ಕೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಇದೆ. ಆದರೆ ಶಾಸಕರಿಗೆ ಮಾತ್ರ ನಿಗಮ ಮಂಡಳಿಯಲ್ಲಿ ಸ್ಥಾನವನ್ನು ನೀಡುತ್ತಿದ್ದಾರೆ. ಸ್ಥಾನ ನೀಡಿದ ಮೇಲೂ ಹಲವರು ಅಸಮಾಧಾನ ಹೊರ ಹಾಕಬಹುದು. ಹೀಗಾಗಿಯೇ ಮೊದಲೇ ಎಲ್ಲಾ ಷರತ್ತುಗಳನ್ನು ತಿಳಿಸಿ, ಪಟ್ಟಿ ಫೈನಲ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ನಿರ್ಧಾರ ಮಾಡಿಯೇ ಬರುತ್ತೇವೆ ಎಂದು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದ ಖ್ಯಾತ ವೈದ್ಯ ಡಾ. ಶ್ರೀನಿವಾಸ ಶೆಟ್ಟಿ ಸೈಬರ್ ವಂಚನೆ ಪ್ರಕರಣ : ವಂಚಕರ ಜಾಲ ಭೇದಿಸಿದ ಸಿಇಎನ್ ಪೊಲೀಸರು

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.08 : ನಗರದ ಖ್ಯಾತ ವೈದ್ಯ ಡಾ. ಶ್ರೀನಿವಾಸ ಶೆಟ್ಟಿಯವರಿಗೆ ಕಳೆದ ತಿಂಗಳು ನಡೆದಿದ್ದ ಸೈಬರ್ ವಂಚನೆ ಪ್ರಕರಣವನ್ನು ಚಿತ್ರದುರ್ಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಭೇದಿಸಿದ್ದಾರೆ. ನಗರದ ಹಿರಿಯ ವೈದ್ಯರಾದ

ದರ್ಶನ್ ರಾಜಾತಿಥ್ಯ ಫೋಟೋ ರಿವಿಲ್ ಮಾಡಿದ್ದೇ ರಾಜ್ಯ ಸರ್ಕಾರ : ಜೋಶಿ ಹೇಳಿಕೆಗೆ ಡಿಕೆಶಿ ಹೇಳಿದ್ದೇನು..?

  ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ಗಳ ಜೊತೆಗೆ ಕೂತು ಟೀ ಕುಡೊಯುತ್ತಾ, ಸಿಗರೇಟು ಸೇದುತ್ತಾ, ನಗುಮುಖದಲ್ಲಿದ್ದ ದರ್ಶನ್ ಅವರ ಫೋಟೋ ಒಂದು ವೈರಲ್ ಆಗಿತ್ತು. ಆ ಬಳಿಕವೇ ದರ್ಶನ್ ಅವರನ್ನು ಬಳ್ಳಾರಿ

ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಎಂಬಿ ಪಾಟೀಲ್ : ಬೆಳೆಯುತ್ತಲೇ ಇದೆ ಆಕಾಂಕ್ಷಿಗಳ ಪಟ್ಟಿ..!

  ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಆಗಾಗ ಸಿಎಂ ಬದಲಾವಣೆಯ ವಿಚಾರ ಚರ್ಚೆಗೆ ಬರ್ತಾನೆ ಇರುತ್ತದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯುತ್ತಾರೆ ಎಂಬ ಚರ್ಚೆಯ ಜೊತೆಗೆ ನಾನು ಕೂಡ ಸಿಎಂ ಆಗಬಹುದು ಎಂಬ ಆಸೆ

error: Content is protected !!