ಹುಬ್ಬಳ್ಳಿ: ಜೆಡಿಎಸ್ ನಿಂದಲೇ ನಾನು ಬೆಳೆದಿದ್ದೀನಿ. ಅಲ್ಲಿಂದ ದೊಡ್ಡವನಾಗಿದ್ದೀನಿ. ಆ ಇದರಿಂದ ನಾನು ಹೇಳೋದು ಯಾರಿಗೂ ಅಲ್ಲಿಂದ ಬಿಟ್ಟು ಹೋಗಿ ಅಂತಾನು ಹೇಳಿಲ್ಲ. ಆ ಬಗ್ಗೆ ನಾನು ಟೀಕೆಯನ್ನು ಮಾಡಿಲ್ಲ. ದೇವೇಗೌಡ ಅವರು ನನ್ನನ್ನು ಕರೆದು ಆಗಿನ ಕಾಲಕ್ಕೆ ಮಂತ್ರಿ ಮಾಡಿದ್ದರು. ಅಭಿವೃದ್ಧಿಯಾದಾಗ ಆ ವಿಚಾರ ಬಂದು ನಿಂತಿದೆ ಅಷ್ಟೆ ಎಂದು ಬಸವರಾಜ ಹೊರಟ್ಟಿ ಎಂದಿದ್ದಾರೆ.
ಈಗಾಗಲೇ ಚುನಾವಣೆ ಪ್ರಚಾರ ಕಾರ್ಯ ಶುರುವಾಗಿದೆ. ಎಲ್ಲರೂ ನನ್ಮೇಲೆ ವಿಶ್ವಾಸ ಇಟ್ಟವ್ರೆ. ಆ ವಿಶ್ವಾಸ ಕಳೆದುಕೊಂಡಿಲ್ಲ. ಚುನಾವಣೆಗೆ ನಿಲ್ತೀನಿ ಚುನಾವಣೆಯಲ್ಲಿ ಗೆಲ್ತೇನೆ. ಇಷ್ಟನ್ನು ಮಾತ್ರ ನಾನು ಹೇಳಬಲ್ಲೆ.
ಅನೇಕ ಜನ ಬಂದು ವಿಚಾರ ಹೇಳಿದ್ದರು. ಮೊದಲು ಡಿಕ್ಲೇರ್ ಆಗಲಿ ಆಮೇಲೆ ನಿಲ್ತೇನೆ ಅಂತ ಹೇಳಿದ್ದೆ. ಅವರೇ ಅಭ್ಯರ್ಥಿ ಅಂದ್ರು ನಮ್ಮದೇನು ತಕರಾರು ಇಲ್ಲ. ಜವಬ್ದಾರಿ ಸ್ಥಾನದಲ್ಲಿದ್ದೇನೆ. ನಾನೆಂದು ಸುಳ್ಳೇಳಲು ಸಾಧ್ಯವಿಲ್ಲ. ನಡೆದ ಘಟನೆಯನ್ನು ಹೇಳಿದ್ದೇನೆ. ಚುನಾವಣೆಗೆ ನಿಲ್ಲೋದು ಗ್ಯಾರಂಟಿ. ಇವ್ರ ಡೆವಲಪ್ಮೆಂಟ್ ಏನಾಗುತ್ತೆ ಅಂತ ನೋಡಿಕೊಂಡು ಹೇಳುತ್ತೇನೆ. ನಾನು ಯಾವ ಪಕ್ಷದಿಂದಲೇ ನಿಲ್ಲಲಿ ನನ್ನನ್ನು ಸೋಲಿಸುವುದಕ್ಕೆ ಸಾಧ್ಯವಿಲ್ಲ. ಬರೆದಿಟ್ಟುಕೊಳ್ಳಿ ಹೇಗೆ ನಿಂತರು ನಾನು ಗೆಲ್ಲುತ್ತೇನೆ ಎಂದಿದ್ದಾರೆ.
ನನ್ನ ಮಗ ರಾಜಕೀಯ ಬೇಡವೇ ಬೇಡ ಎಂದಿದ್ದಾರೆ. ಕೆಲವು ಮುಖಂಡರು ನನ್ನ ಬಳಿ ಬಂದು ಹೇಳಿದ್ದರು ಪ್ರತ್ಯೇಕವಾಗಿ ನಿಲ್ಲಿ ಎಂದಿದ್ದರು. ಕುಮಾರಸ್ವಾಮಿ ಅವರಿಗೂ ಹೇಳಿದ್ದಾಗ ಆಯ್ತು ಬಿಡ್ರೀ ನಿಲ್ಲಿರಿ ತಪ್ಪೇನಿದೆ ಅಂದಿದ್ದರು. ಆಮೇಲೆ ಡೆವಲಪ್ಮೆಂಟ್ ಏನಾಯ್ತು ಬೇಡ ನಮ್ಮ ಪಕ್ಷದಲ್ಲೇ ನಿಲ್ಲಿ ಅಂತ ಹೇಳಿದ್ದರು. ವಿಚಾರ ಮಾಡ್ತೀನಿ ಅಂತ ಹೇಳಿದ್ದೆ. ಕೆಲವು ಡೆವಲಪ್ಮೆಂಟ್ ಆದ ನಂತರ ಬಂದಾಗ ಆಯ್ತು ಬಿಡ್ರಿ ಅಂತ ಹೇಳಿದ್ದೇ ಎಂದಿದ್ದಾರೆ