ನಾನು ಕೊವಿಡ್ ಮಾಡಿಸುತ್ತೇನೆ, ಸಚಿವರು ಮಾಡಿಸುತ್ತಾರೆ : ಸಿಎಂ ಬೊಮ್ಮಾಯಿ

1 Min Read

ಬೆಂಗಳೂರು: 20 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರಲಿದ್ದು, ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಇಂದು ಸ್ಯತಳ ಪರಿಶೀಲನೆಯನ್ನು ಖುದ್ದು ಸಿಎಂ ಬಸವರಾಜ್ ಬೊಮ್ಮಾಯಿ ಅವರೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿ ಅವರು, ಹಲವಾರು ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಮಿಕ್ ವಿದ್ಯಾಲಯ ಉದ್ಘಾಟನೆ ಮಾಡಲಿದ್ದಾರೆ. ನಂತರ ಮೈಸೂರಿಗೆ ತೆರಳಲಿದ್ದಾರೆ, 21 ರಂದು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.

ಅಧಿಕಾರಿಗಳು ಎಲ್ಲ ರೀತಿ ಸಹಕಾರ ನೀಡ್ತಿದ್ದಾರೆ. ಎಸ್‌ಪಿಜಿ ಮಾರ್ಗದರ್ಶನದಂತೆ ಎಲ್ಲ ಸಿದ್ದತೆಗಳೂ ನಡೆಯುತ್ತಿವೆ. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಬಹಳ ವರ್ಷದಿಂದ ಆಗಬೇಕು ಅಂತ ಇತ್ತು. ಅದರ ಬೇಡಿಕೆ ಈಗೀಡೇರುತ್ತಿದೆ. ಹೊರವಲಯಕ್ಕೆ ಸುಲಭ ಸಾರಿಗೆ ಆಗಬೇಕು ಅದರ ಅವಶ್ಯಕತೆ ಪೂರೈಕೆ ಆಗುತ್ತಿದೆ ಎಂದಿದ್ದಾರೆ.

ಇನ್ನು ಕೋವಿಡ್ ಟೆಸ್ಟ್ ಗೊಂದಲ ವಿಚಾರವಾಗಿ ಮಾತನಾಡಿ, ಒಳಾಂಗಣ ಸಮಾರಂಭದಲ್ಲಿ ಭಾಗವಹಿಸುವವರು ಕೋವಿಡ್ ಟೆಸ್ಟ್ ಮಾಡಿಸಬೇಕು. ಆದರೆ ಹೊರಾಂಗಣ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಯಾವುದೇ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿಲ್ಲ. ನಾನೂ ಕೂಡ ಕೋವಿಡ್ ಟೆಸ್ಡ್ ಮಾಡಿಸ್ತೇನೆ. ಸಚಿವರೂ ಕೂಡ ಕೋವಿಡ್ ಟೆಸ್ಟ್ ಮಾಡಿಸ್ತಾರೆ.

Share This Article
Leave a Comment

Leave a Reply

Your email address will not be published. Required fields are marked *