ನವದೆಹಲಿ: ರಾಹುಲ್ ಗಾಂಧಿ ದೆಹಲಿಯಲ್ಲಿ ನಡೆದ ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ದೇಶದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ದೇಶವನ್ನು ನಾನು ಹೆಚ್ಚಾಗಿ ಪ್ರೀತಿಸಿದೆ ಆದರೆ ದೇಶ ನನ್ನನ್ನು ಪ್ರೀತಿಸಲೇ ಇಲ್ಲ. ಬದಲಿಗೆ ದ್ವೇಷಿಸಿದೆ, ಚಪ್ಪಲಿಯಿಂದ ಹೊಡೆದಿದೆ. ನಾನೂ ಎಷ್ಟು ನೋವು ತಿಂದಿದ್ದೇನೆ ಅನ್ನೋದು ನನಗೆ ಮಾತ್ರ ಗೊತ್ತು ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.
ನಾನೂ ಸಹ ಈ ನೋವಿನ ಬಗ್ಗೆಯೆಲ್ಲಾ ಯೋಚನೆ ಮಾಡಿದೆ. ನಾನು ಪ್ರೀತಿ ಕೊಟ್ಟರು ಪ್ರೀತಿ ಬದಲಿಗೆ ದ್ವೇಷ ಸಿಗುತ್ತಿದೆ. ನಾನು ಎಷ್ಟು ನೋವು ತಿಂದಿದ್ದೇನೆ ಎಂಬುದು ನಿಮಗೆ ಯಾರಿಗೂ ಅರ್ಥವಾಗೋದಿಲ್ಲ. ಆದರೆ ನಾನು ಯೋಚನೆ ಮಾಡಿದಾಗ ಅನ್ನಿಸಿದ್ದು, ದೇಶ ನನಗೆ ಪಾಠ ಕಲಿಸುತ್ತಿದೆ ಎಂಬುದು.
ನಾನು ಹುಟ್ಟಿದ್ದೆ ಅಧಿಕಾರವಿರುವ ಕುಟುಂಬದಲ್ಲಿ. ಆದರೆ ನನಗೆ ಅಧಿಕಾರ ಬೇಕು ಅಂತ ಸತ್ಯವಾಗಲೂ ಅನ್ನಿಸಿಲ್ಲ. ಅಧಿಕಾರದ ಮೇಲೆ ಆಸಕ್ತಿಯೇ ಇಲ್ಲ. ಕೆಲವರು ಬೆಳಗ್ಗೆಯಾದರೇ ಅಧಿಕಾರಕ್ಕಾಗಿಯೇ ಹೊಡೆದಾಡುತ್ತಾರೆ ಎಂದಿದ್ದಾರೆ.
ಇನ್ನು ಈಗಾಗಲೇ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಕರ್ನಾಟಕದಲ್ಲಿ ಎಲೆಕ್ಷನ್ ಹತ್ತಿರವಾಗುತ್ತಿದೆ. ಇಲ್ಲಿ ಕಾಂಗ್ರೆಸ್ ಗೆಲ್ಲಿಸಲು ನಾನಾ ಯತ್ನಗಳು ನಡೆಯುತ್ತಿವೆ. ಈ ಮಧ್ಯೆ ರಾಹುಲ್ ಗಾಂಧಿ ಅವರ ಈ ಹೇಳಿಕೆ ಆಶ್ಚರ್ಯಕ್ಕೆ ಕಾರಣವಾಗಿದೆ.