ಮೈಸೂರು: ಗುಂಬಜ್ ಮಾದರಿ ಬಸ್ ನಿಲ್ದಾಣದ ವಿಚಾರ ಈಗ ಬಾರೀ ಚರ್ಚೆಗೆ ಗ್ರಾಸವಾಗಿದೆ. ಸಂಸದ ಪ್ರತಾಪ್ ಸಿಂಹ ಅವರು ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನು ಜೆಸಿಬಿ ತಂದು ಒಡೆದು ಹಾಕುತ್ತೇವೆ ಎಂದು ಹೇಳಿಕೆ ಕೊಟ್ಟಾಗಿನಿಂದ ಶಾಸಕ ಮತ್ತು ಸಂಸದರ ನಡುವೆ ಮಾತಿನ ಚಕಮಕಿ ನಡೆಯುತ್ತಲೆ ಇದೆ. ಇಂದು ಕೂಡ ಶಾಸಕ ಎ ರಾಮದಾಸ್ ಕೈ ಮುಗಿದು ಮನವಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ವಿಷಯವನ್ನು ವಿವಾದ ಮಾಡಬೇಡಿ. ಬಸ್ ನಿಲ್ದಾಣವನ್ನು ಗುಂಬಜ್ ಮಾಡಬೇಕು ಎಂದು ನಿರ್ಮಿಸಿದ್ದಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಚಾರ ವೈರಲ್ ಆದ ತಕ್ಷಣ ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ಇದನ್ನು ಯಾರು ಪ್ರಾರಂಭ ಮಾಡಿದರೂ, ಡಮಾಜ ಒಡೆಯುವ ಕೆಲಸ ಯಾರು ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿ, ತಕ್ಕ ಶಿಕ್ಷೆ ನೀಡಲು ಮನವಿ ಮಾಡಿದ್ದೇನೆ. ಆದ್ರೆ ಕೈ ಮುಗಿದು ಮನವಿ ಮಾಡುತ್ತೇನೆ ಇದನ್ನು ಇಲ್ಲಿಗೆ ನಿಲ್ಲಿಸಿ ಎಂದಿದ್ದಾರೆ.
ಮೈಸೂರು ಅರಮನೆ ಮಾದರಿಯಲ್ಲಿಯೇ ಕಾಣಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಅದರಂತೆ ಹನ್ನೆರಡು ನಿಲ್ದಾಣಗಳನ್ನು ಮಾಡಿದ್ದೇವೆ. ಜೆಎಸ್ ಎಸ್ ಕಾಲೇಜು ಹಾಗೂ ನಂಜನಗೂಡಿಗೆ ಹೋಗುವವರು ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಬಸ್ ನಿಲ್ದಾಣ ಮಾಡಿದ್ದೇವೆ ಎಂದಿದ್ದಾರೆ.