ನನಗೆ ಬೆದರಿಕೆ ಕರೆ ಇದೆ : ಈಶ್ವರಪ್ಪ ಶಾಕಿಂಗ್ ನ್ಯೂಸ್

1 Min Read

ಶಿವಮೊಗ್ಗ: ಈ ಹಿಂದೆ ಎರಡು ಬಾರಿ ವಿದೇಶದಿಂದ ಬೆದರಿಕೆ ಕರೆಗಳು ಬಂದಿದ್ದವು. ಅದಾದ ನಂತರ ಆ ಸಂದರ್ಭದಲ್ಲಿಯೇ ಹೇಳಿದ್ದೆ ಯಾವ ದೇಶದ್ರೋಹಿ ಸಂಘಟನೆ ನನಗೆ ಬೆದರಿಕೆ ಕರೆಗಳನ್ನ ಹಾಕಿದೆ, ಯಾವ ದೇಶದ್ರೋಹಿ ವ್ಯಕ್ತಿಗಳು ಈ ಬೆದರಿಕೆ ಕರೆಯನ್ನು ಮಾಡ್ತಾ ಇದ್ದಾರೆ. ಈ ಬಗ್ಗೆ ತನಿಖೆ ಆಗ್ಬೇಕು ಎಂಬಂತ ಅಂಶವನ್ನ ಹಿಂದೆ ಸರ್ಕಾರಕಕ್ಕೆ ನಾನು ಒತ್ತಾಯ ಮಾಡಿದ್ದೆ. ಆದ್ರೆ ಆ ಸಂದರ್ಭದಲ್ಲಿ ಕೂಡ ತನಿಖೆ ಮಾಡಿ ಯಾವ ವ್ಯಕ್ತಿಯಿಂದ ಬೆದರಿಕೆ ಕರೆಗಳು ಬಂದಿವೆ ಎಂಬುದನ್ನ ಇವತ್ತಿನ ತನಕವೂ ಹೇಳಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಬೇಸರ ಹೊರ ಹಾಕಿದ್ದಾರೆ.

ಬೆಂಗಳೂರು ಮನೆಗೆ, ಶಿವಮೊಗ್ಗ ಮನೆಗೆ ನನಗೆ ಭದ್ರತೆಯನ್ನ ಮಾಡಿಕೊಟ್ರು. ಎಸ್ಕಾರ್ಟ್ ಕೂಡ ಕೊಟ್ಟಿದ್ದರು. ಆದ್ರೆ ಈಗ ಮತ್ತೆ ಮೂರು ತಿಂಗಳ ಕೆಳಗೆ ವೈ ಕೆಟಗರಿ ಭದ್ರತೆಯನ್ನ ವಾಪಾಸ್ ತೆಗೆದುಕೊಂಡಿದ್ದಾರೆ. ಆ ಭದ್ರತೆಯನ್ನು ವಾಪಾಸ್ ತೆಗೆದುಕೊಂಡಿದ್ದನ್ನು ಗಮನಿಸಿದ ದೇಶದ್ರೋಹಿಗಳು ಮತ್ತೆ ಬೆದರಿಕೆ ಹಾಕಿದ್ದಾರೆ. ವಿದೇಶದಿಂದ ಕರೆ ಬಂದಿದೆ ಅನ್ನೋದು ನನ್ನ ಭಾವನೆ.

ಯಾರಿಂದ ಕರೆ ಬಂದಿದೆ ಎಂಬುದರ ತನಿಖೆಯಾಗಬೇಕು. ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರಕ್ಕೂ ಮನವಿ ಮಾಡಿದ್ದೇನೆ. ತನಿಖೆಗೆ ಮನವಿಯನ್ನು ಮಾಡಿದ್ದೇನೆ. ವಾಪಾಸ್ ವೈ ಕ್ಯಾಟಗರಿ ಭದ್ರತೆಯನ್ನು ಮತ್ತೆ ನೀಡಬೇಕು ಎಂದು ಕೇಳಿಕೊಳ್ಳುತ್ತೇನೆ. ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡೋದು ಇಷ್ಟೆ, ಹಿಂದೆ ಮಾಡಿದ ಕರೆ ರೀತಿಯೇ ಮಾಡಿದ್ದಾರೆ. ಇದು ತನಿಖೆಯಾದ ಮೇಲೆ ಅದಕ್ಕೊಂದು ನ್ಯಾಯ ಸಿಗುತ್ತದೆ. ರಾಜ್ಯದ ಗೃಹ ಸಚಿವರಿಗೂ ಈ ಸಂಬಂಧ ಒತ್ತಾಯ ಮಾಡುತ್ತೇನೆ ಎಂಬ ಮಾತನ್ನ ಹೇಳಿದ್ದಾರೆ.

Share This Article