ನಾನು ಹಿಂದೂ ದೇವರನ್ನು ಆರಾಧಿಸುವುದಿಲ್ಲ : AAP ಸಚಿವ

ನವದೆಹಲಿ: ನನಗೆ ಯಾವುದೇ ಹಿಂದೂ ದೇವರಲ್ಲಿ ನಂಬಿಕೆಯಿಲ್ಲ ಎಂಬುದಾಗಿ AAP ಸಚಿವ ರಾಜೇಂದ್ರ ಪಾಲ್ ಗೌತಮ್ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ಇತ್ತಿಚೆಗೆ ನಡೆದ ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಉದ್ದೇಶದಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಸಚಿವ ರಾಜೇಂದ್ರ ಪಾಲ್, ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ನಂಬಿಕೆ ಇಲ್ಲ. ರಾಮ ಮತ್ತು ಕೃಷ್ಣರಲ್ಲೂ ನಂಬಿಕೆ ಇಲ್ಲ. ನಾನು ಹಿಂದೂ ದೇವರನ್ನು ಆರಾಧಿಸುವುದಿಲ್ಲ ಎಂದಿದ್ದಾರೆ. ಅದರ ಜೊತೆಗೆ ಬೃಹತ್ ಜನ ಸಮೂಹವೊಂದು ಹಿಂದೂ ದೇವರುಗಳನ್ನು ಪೂಜಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ವಿಡಿಯೋ ಕೂಡ ವೈರಲ್ ಆಗಿದೆ.

ಈ ವಿಡಿಯೋವನ್ನು ಬಿಜೆಪಿ ಪೋಸ್ಟ್ ಮಾಡಿದೆ. ಇದು ಭಾರತ ಒಡೆಯುವ ಹುನ್ನಾರ ಎಂದು ಕ್ಯಾಪ್ಶನ್ ಹಾಕಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಆ ಕಾರ್ಯಕ್ರಮ ಬುದ್ಧನ ಕಡೆಗೆ ನಡೆಯುವ ಕಾರ್ಯಕ್ಯವಾಗಿತ್ತು. ಹತ್ತು ಸಾವಿರ ಜನ ಬುದ್ಧಿ ಜೀವಿಗಳು ಭಾರತವನ್ನು ಅಸ್ಪೃಶ್ಯತೆ ಮುಕ್ತ ದೇಶವನ್ನಾಗಿ ಮಾಡುವ ಮುಖ್ಯ ಉದ್ದೇಶದಿಂದ ಈ ಶಪಥ ಕೈಗೊಂಡಿದ್ದೇವೆ. ಜೈ ಭೀಮ್ ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *