ಬಾಗಲಕೋಟೆ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಕಮೀಷನ್ ಆರೋಪಕ್ಕೆ ಸಿಲುಕಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದ್ರೆ ಆರೋಪದಿಂದ ಮುಕ್ತನಾದ ಮೇಕೆ ಮತ್ತೆ ಸಚಿವ ಸ್ಥಾನ ಸಿಗುವ ಭರವಸೆಯಲ್ಲಿ ಇದ್ದರು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ ಎಂಬುದು ಈಸ್ವರಪ್ಪ ಅವರ ಅರಿವಿಗೆ ಬಂದಿದೆ. ಹೀಗಾಗಿ ಪಕ್ಷದವರ ಮೇಲೆ ಮುನಿಸು ತೋರುತ್ತಿದ್ದಾರೆ.
ಬೆಳಗಾವಿಗೆ ಹೋದರೂ ಅಧಿವೇಶನಕಜ್ಕೆ ಹೋಗದಂತೆ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸ್ನೇಹಿತರೊಬ್ಬರು ಅಪರಾಧದಿಂದ ಮುಕ್ತರಾದವರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ ಎಂದಿದ್ದಾರೆ. ಈಗಾಗಲೇ ನನ್ನ ವಿಚಾರದಲ್ಲಿ ತೀರ್ಪು ಬಂದಾಗಿದೆ, ಕ್ಲೀನ್ ಚಿಟ್ ಕೊಟ್ಟಾಗಿದೆ. ಈ ಹಿನ್ನೆಲೆ ಇವತ್ತಲ್ಲ ನಾಳೆ ಮಂತ್ರಿ ಮಾಡುತ್ತೀನಿ ಅಂತ ಬೊಮ್ಮಾಯಿ ಅವರು ಮಾತು ಕೊಟ್ಟಿದ್ದಾರೆ. ಆದ್ರೆ ಇನ್ನು ಯಾಕೆ ಆ ಎಲ್ಲಾ ವಿಚಾರಗಳು ಬರುತ್ತಿಲ್ಲವೋ ಗೊತ್ತಿಲ್ಲ.
ಬೆಳಗಾವಿಗೆ ಹೋಗುತ್ತೀನಿ. ಆದ್ರೆ ಈ ಬಾರಿಯ ಅಧಿವೇಶನಕ್ಕೆ ಹೋಗುವುದಿಲ್ಲ. ಈ ಬಗ್ಗೆ ಸಭಾಧ್ಯಕ್ಷರ ಅನುಮತಿಯನ್ನು ಪಡೆಯುತ್ತೇನೆ. ಇನ್ನು ನನಗೆ ಸಚಿವ ಸಂಪುಟ ಸಿಗದೆ ಇದ್ದದ್ದಕ್ಕೆ ಎಲ್ಲರೂ ಕೇಳುತ್ತಿದ್ದಾರೆ. ಈಗಾಗಲೇ ಕ್ಲೀನ್ ಚಿಟ್ ಸಿಕ್ಕಿದೆಯಲ್ಲಾ ಮಂತ್ರಿ ಸ್ಥಾನ ಯಾಕಿಲ್ಲ ಅಂತ. ಹೀಗಾಗಿ ಇದನ್ನು ಅರ್ಥ ಮಾಡಿಸಬೇಕಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.