ಬೆಂಗಳೂರು: ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆ ಸಿದ್ದರಾಮೋತ್ಸವ ಮಾಡಲು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಇದರ ಪೂರ್ವಭಾವಿ ಸಭೆ ಕೂಡ ನಡೆಯುತ್ತಿದೆ. ಈ ಸಭೆಯಲ್ಲಿ ಭಾಗಿಯಾಗ್ತೀರಾ ಎಂಬ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕರೆದಿದ್ದಾರೆ, ನಾನು ಒಬ್ಬ ಪಾರ್ಟಿ ಪ್ರೆಸಿಡೆಂಟ್. ನಾನು ಸ್ವಾತಂತ್ರ್ಯ ಉತ್ಸವದ ಬಗ್ಗೆ ಸಭೆ ಇದೆ. ಅದರಲ್ಲಿ ಭಾಗಿಯಾಗ್ತಿದ್ದೇನೆ. 3ನೇ ತಾರೀಖು ಕಾರ್ಯಕ್ರಮಕ್ಕೆ ಹೋಗ್ತೇನೆ. ನಾನೂ ಕೂಡ ಒಬ್ಬ ಗೆಸ್ಟ್. ರಾಹುಲ್ ಗಾಂಧಿ ಕೂಡ ಬರ್ತಿದ್ದಾರೆ ಎಂದಿದ್ದಾರೆ.
ಇನ್ನು ಸಿದ್ದರಾಮಯ್ಯ 75 ನೇ ಅಮೃತ ಮಹೋತ್ಸವಕ್ಕೆ ಡಿಕೆಶಿ ಉತ್ಸವ ಕೌಂಟರ್ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜು ಬರೆದ ಪತ್ರಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ, ನನಗೆ ಯಾವ ಉತ್ಸವವೂ ಬೇಡ. ನನ್ನ ಹುಟ್ಟು ಹಬ್ಬಕ್ಕೆ ಅನೇಕ ಅಭಿಮಾನಿಗಳು ಜಾಹೀರಾತು ಕೊಡ್ತೇವೆ ಅಂದ್ರು. ನಾನೇ ಬೇಡ ಅಂದೆ. ಬೇರೆಯವರಿಗೆ ತೊಂದರೆ ಬೇಡ ಅಂತಾ ಕುಟುಂಬದ ಜೊತೆ ಕೇದಾರನಾಥಗೆ ಹೋಗಿದ್ವಿ.
ಅವರವರ ಅಭಿಮಾನಿಗಳ ವಿಚಾರ. ರಾಜು ಬರೆದ ಪತ್ರ ವೈಯಕ್ತಿಕ ವಿಚಾರ. ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ಅಧಿಕಾರ ಸ್ವೀಕರಿಸುವಾಗಲೇ ಹೇಳಿದ್ದೇನೆ. ವ್ಯಕ್ತಿ ಪೂಜೆ ಬೇಡ, ಪಕ್ಷಪೂಜೆ ಮಾಡಿ ಅಂತಾ. ಇವತ್ತು ಅದನ್ನೇ ಹೇಳ್ತೇನೆ. ನನಗೆ ಪಾರ್ಟಿಉತ್ಸವ ಬೇಕು.. ವಿಧಾನಸೌಧದಲ್ಲಿ ಪಾರ್ಟಿಯನ್ನ ಕೂರಿಸಬೇಕು ಎಂದಿದ್ದಾರೆ.