ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗ್ಲೇ ಆರ್ ಎಸ್ ಎಸ್ ಸಂಘಟನೆಯನ್ನ ದ್ವೇಷಿಸುತ್ತೇನೆಂದು ಹೇಳಿದ್ದಾರೆ. ಇದೀಗ ಮತ್ತೆ ಆರ್ ಎಸ್ ಎಸ್ ಸಂಘಟನೆ ಬಗ್ಗೆ ಮಾತನಾಡಿದ್ದು, ಅದೊಂದು ಮನುಸ್ಮೃತಿ, ಶ್ರೇಣಿಕೃತ ಸಂಘಟನೆ ಹೀಗಾಗಿ ಅದನ್ನ ವಿರೊಧಿಸುತ್ತೇನೆ ಎಂದಿದ್ದಾರೆ.
ಹುಬ್ಬಳ್ಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಒಬ್ಬರಾದ್ರಾ ಮುಸ್ಲಿಂ ಎಂಎಲ್ಎ ಇದ್ದಾರಾ..? ಆರ್ ಎಸ್ ಎಸ್ ಅಲ್ಪಸಂಖ್ಯಾತರ ವಿರುದ್ಧವಾಗಿದೆ. ಆರ್ ಎಸ್ ಎಸ್ ದೇಶ, ಸಮಾಜ ವಿಭಜನೆ ಮಾಡೋ ಕೆಲಸ ಮಾಡುತ್ತೆ.
ಇನ್ನು ಈಶ್ವರಪ್ಪ ಮುಸ್ಲಿಮರು ಬಂದು ಆಫೀಸಲ್ಲಿ ಕಸ ಹೊಡಿಲಿ ಅಂತಾರೆ. ಸಂವಿಧಾನ ಬದಲಾವಣೆ ಮಾಡ್ತೀವಿ ಅಂತಾರೆ ಎಂದು ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲ ಇದೇ ವೇಳೆ ಕುಮಾರಸ್ವಾಮಿ ಅವರ ಬಗ್ಗೆಯೂ ಮಾತನಾಡಿದ್ದು, ಕುಮಾರಸ್ವಾಮಿ ಬರೀ ಸುಳ್ಳು ಹೇಳ್ತಾರೆ. ಹೀಗಾಗಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.