ಬೆಂಗಳೂರು: ನನ್ನ ಹುಟ್ಟುಹಬ್ಬವನ್ನು ಪಕ್ಷದವರೇ ಮಾಡ್ತಾ ಇದಾರೆ. ನಮ್ಮ ಪಕ್ಷದ ಆರ್ ವಿ ದೇಶಪಾಂಡೆ ಇದಕ್ಕೆ ಅಧ್ಯಕ್ಷ. ರಾಯರೆಡ್ಡಿ ಇದಾರೆ. ಪಕ್ಷದ ವೇದಿಕೆ ಅಲ್ಲದೇ ಇದ್ದರೂ ಪಕ್ಷದವರೇ ಮಾಡ್ತಾ ಇದಾರೆ ಎಂದು ತಮ್ಮ ಹುಟ್ಟುಹಬ್ಬದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ.
ನಾನು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯನ್ನು ಕರೆದಿದ್ದೀನಿ. ಬಿ ಕೆ ಹರಿಪ್ರಸಾದ್, ಡಿ ಕೆ ಶಿವಕುಮಾರ್, ಮುನಿಯಪ್ಪ ಎಲ್ಲರಿಗೂ ಕರೆದಿದ್ದಿನಿ. ನಾನು ಇದನ್ನ ಸಿದ್ದರಾಮೋತ್ಸವ ಎಂದಿಲ್ಲ. ನನ್ನ ೭೫ ನೇ ಹುಟ್ಟುಹಬ್ಬದ ಹಿನ್ನಲೆ ಅಮೃತ ಮಹೋತ್ಸವ. ಇದು ನನ್ನ ಜೀವನದ ಮೈಲ್ ಸ್ಟೋನ್ ಅದಕ್ಕೆ ಅಮೃತ ಮಹೋತ್ಸವ ಅಂದಿದ್ದಾರೆ.
ಇದಕ್ಕೆ ಪಕ್ಷದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಯಾರ ಆಕ್ಷೇಪವೂ ಇಲ್ಲ. ನೀವು ಮಾತ್ರ ಹೀಗೆ ಇರೋದು. ಇದರಲ್ಲಿ ರಾಜಕೀಯ ಸಂದೇಶ ಇದೆಯಲ್ಲ ಸರ್ ಎಂಬ ಪ್ರಶ್ನೆಗೆ ರಾಜಕೀಯ ಸಂದೇಶ ಇದ್ದೇ ಇರುತ್ತೆ. ನಾನೇನು ಸನ್ಯಾಸಿ ಅಲ್ಲ, ಡಿ ಕೆ ಶಿವಕುಮಾರ್ ಸಹ ಸನ್ಯಾಸಿ ಅಲ್ಲ, ರಾಹುಲ್ ಗಾಂಧಿ ಸನ್ಯಾಸಿ ಅಲ್ಲ. ನಮ್ಮ ಕಾಲದ ಸಾಧನೆ ತೋರಿಸ್ತಿವಿ ಅಂದರೆ ಅದರಲ್ಲಿ ರಾಜಕೀಯ ಇದ್ದೇ ಇದೆ. ನನ್ನ ಜೀವನ ಸಾಧನೆ ಅಂದರೆ ಅದು ರಾಜಕೀಯ ಎಂದಿದ್ದಾರೆ.