ನಾನೆಂದು ನಿನ್ನವ..ಕೇವಲ ನಿನ್ನವ.. ಸ್ಪಂದನಾ ನೆನದು ವಿಜಯ್ ರಾಘವೇಂದ್ರ ಪೋಸ್ಟ್..!

1 Min Read

 

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿ ಇಂದಿಗೆ 12 ದಿನ. ಮುದ್ದಾದ ಜೋಡಿ. ಯಾವಾಗಲೂ ಹೆಂಡತಿಯನ್ನು ಪ್ರೀತಿಯಿಂದ ಹೊಗಳುತ್ತಿದ್ದ ರಾಘು. ಮಗನೆಂದರೆ ಕನಸು, ಮಗನೆಂದರೆ ಪ್ರಾಣ. ಶೌರ್ಯನಿಗೆ ತಾಯಿಯಿಲ್ಲವೆಂಬ ಕೊರಗನ್ನ ನೀಗಿಸಿಕೊಳ್ಳುವುದು ಗೊತ್ತಾಗದ ವಯಸ್ಸು. ಇಡೀ ರಾಜ್ಯವೇ ಈ ಸಾವಿನ ಬಳಿಕ ದೇವರನ್ನು ಶಪಿಸಿತ್ತು. ರಾಘು ಮಂಕಾಗಿ ಹೋಗಿದ್ದರು. ಹನ್ನೆರಡು ದಿನದ ಬಳಿಕ ಇಲ್ಲಿಂದಾನೇ ಸ್ಪಂದನಾಗೊಂದು ಮೆಸೇಜ್ ಕಳುಹಿಸಿದ್ದಾರೆ. ನಾನೆಂದಿಗೂ ನಿನ್ನವ.. ಕೇವಲ ನಿನ್ನವನೆಂದು.

https://www.instagram.com/reel/CwEl7D4M8Fk/?igshid=MzRlODBiNWFlZA==

ವಿಜಯ್ ರಾಘವೆಂದ್ರ ಪತ್ನಿ‌ ಸ್ಪಂದನಾ ಬಗೆಗೊಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. “ಸ್ಪಂದನ.. ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೆ ಮಿಡಿದೆ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದು ನಿನ್ನವ, ಕೇವಲ ನಿನ್ನವ ಚಿನ್ನ” ಎಂದು ಸ್ಪಂದನಾರ ಮುದ್ದಾದ ಫೋಟೋ ಒಂದನ್ನು ಹಾಕಿ ತನ್ನ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಸ್ಪಂದನಾ ಬಗೆಗಿನ ಭಾವವನ್ನು ಬರೆದು, ತಾನೇ ಧ್ವನಿ ಕೊಟ್ಟಿದ್ದಾರೆ. ಈ ವಿಡಿಯೋ ಎಲ್ಲರ ಮನಸ್ಸಿಗೆ ಮತ್ತಷ್ಟು ಘಾಸಿ‌ಮಾಡುತ್ತಿದೆ. ದೂರದಲ್ಲಿ ನೋಡುವ ನಮಗೆ ಇಷ್ಟೊಂದು ನೋವಾಗುವಾಗ, ಸದಾ ಬೆನ್ನೆಲುಬಾಗಿ ನಿಂತು, ಪ್ರೀತಿಧಾರೆ ಎರೆಯುತ್ತಿದ್ದ ಮಡದಿ, ತಾಯಿಯನ್ನು ಕಳೆದುಕೊಂಡ ಆ ಇಬ್ಬರಿಗೆ ಇನ್ನೆಷ್ಟು ನೋವಾಗಬೇಡ. ಕಮೆಂಟ್ ಗಳ ಮೂಲಕವೂ ಮತ್ತಷ್ಟು ಸಮಾಧಾನ ಮಾಡುವ ಕೆಲಸ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *