ವಿಜಯಪುರ: ಶಾಸಕ ಬಸನಗೌಡ ಯತ್ನಾಳ್ ಯಾವಾಗ ನೋಡಿದ್ರು, ತಮ್ಮ ಪಕ್ಷದವರ ಬಗ್ಗೆಯೇ ಕಿಡಿಕಾರುತ್ತಾ ಇರುತ್ತಾರೆ. ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಹಾಗೂ ವಿಜಯೇಂದ್ರ ಅವರ ಬಗ್ಗೆ ಆಕ್ರೋಶದ ಮಾತುಗಳನ್ನೇ ಆಡುತ್ತಾ ಇರುತ್ತಾರೆ. ಇದೀಗ ಯತ್ನಾಳ್ ಅವರಿಗೆ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ನೀವೂ ಯಾವ ಪಕ್ಷಕ್ಕೆ ನಿಯತ್ತಾಗಿದ್ದೀರಿ ಹೇಳಿ..? ಬಿಜೆಪಿ, ಸಿಎಂ ಹಾಗೂ ಸ್ಚಾಮೀಜಿಗಳ ಬಗ್ಗೆಯೂ ಹಗುರವಾಗಿ ಮಾತನಾಡುತ್ತೀರಾ. ಬಿಜೆಪಿಯಲ್ಲಿದ್ದುಕೊಂಡೆ ಮಾಜಿ ಸಿಎಂ ಬಿಎಸ್ವೈ, ಸಿಎಂ ಬೊಮ್ಮಾಯಿ, ವಿಜಯೇಂದ್ರ ಸೇರಿ ಎಲ್ಲರ ಬಗ್ಗೆಯೂ ಮಾತನಾಡುತ್ತೀರಿ. ಇನ್ನು ಮುಂದೆ ಹಗುರವಾಗಿ ಮಾತನಾಡಿದರೆ, ನಾನು ಅದೇ ಭಾಷೆಯಲ್ಲಿ ಮಾತನಾಡುತ್ತೇನೆ. ಪಕ್ಷದ ಒಂದು ಚೌಕಟ್ಟಿನಲ್ಲಿ ಇರುವುದರಿಂದ ಪಜ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸುಮ್ಮನೆ ಇದ್ದೀನಿ. ನಿಮ್ಮ ಮಟ್ಟಕ್ಕೆ ಇಳಿದು ಮಾತನಾಡಿದ್ರೆ, ನಮಗೂ ನಿಮಗೂ ಏನು ವ್ಯತ್ಯಾಸವಿರುತ್ತೆ ಎಂದು ಪ್ರಶ್ನಿಸಿದ್ದಾರೆ.
ಸಮಾಜದಲ್ಲಿ ನನ್ನದೆ ಆದ ಸ್ಥಾನಮಾನವಿದೆ. ನಾಲಿಗೆ ಚಾಚುವ ಮುನ್ನ ಎಚ್ಚರದಿಂದ ಮಾತನಾಡಿ. ನಿಮ್ಮ ಬಗ್ಗೆ ನಾನು ಚೆನ್ನಾಗಿ ಬಲ್ಲೆ. ನಿಮಗಿಂತಲೂ ಕೆಟ್ಟ ಭಾಷೆ ಮಾತನಾಡುವುದಕ್ಕೆ ನನಗೂ ಬರುತ್ತೆ. ಆದ್ರೆ ನನ್ನ ಸಂಸ್ಕೃತಿ ಆ ಥರದ್ದು ಅಲ್ಲ. ನನ್ನನ್ನು ಬಚ್ಚ ಎನ್ನುವ ಯತ್ನಾಳ್ ರಾಜಕೀಯಕ್ಕೆ ಬರುವ ಮುನ್ನ ಎಲ್ಲಿದ್ದರು..? ಯಾರ್ಯಾರ ಕೈ ಕಾಲು ಹಿಡಿದು ಟಿಕೆಟ್ ಪಡೆದರು ಎಂಬುದು ಗೊತ್ತಿದೆ ಎಂದಿದ್ದಾರೆ.