
ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೂರು ಕೋಟಿ ಲಂಚದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಸುಧಾಕರ್ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ನಾನು ಇದ್ದದ್ದು ಹತ್ತು ವರ್ಷ. ಆದ್ರೆ ಸಿದ್ದರಾಮಯ್ಯ ಇದ್ದದ್ದು ಮೂವತ್ತು ವರ್ಷ. ಮತ್ತೆ ಅವರ್ಯಾಕೆ ಪಕ್ಷವನ್ನು ಬಿಟ್ಟು ಬಂದರೂ ಎಂದು ಪ್ರಶ್ನೆ ಕೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವ ಸುಧಾಕರ್, ನಾನು ಕಳ್ಳ ಮಾರ್ಗದಲ್ಲಿ ಬಿಜೆಪಿ ಸೇರಿಲ್ಲ. ರಾಜಮಾರ್ಗದಲ್ಲಿಯೇ ಬಿಜೆಪಿಗೆ ಬಂದಿದ್ದೇನೆ. ಯಾರೋ ಹೇಳಿಕೊಟ್ಟದ್ದನ್ನು ಹೇಳುವುದಕ್ಕೆ ನಾವೇನು ಸಣ್ಣ ಮಕ್ಕಳಲ್ಲ. ಸಿದ್ದರಾಮಯ್ಯ ಸುಳ್ಳು ಹೇಳುವುದನ್ನು ಕಲಿತಿದ್ದಾರೆ. ಯಾಕೆ ಮಾತಿಗೆ ಮುಂಚೆ ಕಾಂಗ್ರೆಸ್ ಪಕ್ಷವನ್ನೇ ನಿಂದಿಸುತ್ತಾ ಬಂದು ಸಿಎಂ ಆಗುವ ಆಸೆಗೆ ತಾನೇ ಕಾಂಗ್ರೆಸ್ ಸೇರಿದ್ದು ಎಂದಿದ್ದಾರೆ.
2019ರಲ್ಲಿ ಸಮ್ಮಿಶ್ರ ಸರ್ಕಾರ ಆಯ್ತು. ಆಗ ಸಿದ್ದರಾಮಯ್ಯ ಅವರೇ ಹೇಳಿದ್ದರು. ಸಮ್ಮಿಶ್ರ ಸರ್ಕಾರ ಬೀಳುತ್ತೆ ಅಂತ. ಲೋಕಸಭಾ ಚುನಾವಣೆವರೆಗೂ ಕಾಯುವುದಕ್ಕೂ ನೀವೇ ಹೇಳಿದ್ರಿ. ಒಂದು ವರ್ಷ ನಿಮ್ಮ ಮಾತನ್ನು ನಂಬಿಕೊಂಡು ಕಾದೆವು. ವರ್ಷವಾದ ಮೇಲೆ ರಾಹುಲ್ ಗಾಂಧಿ ಅವರು ಇನ್ನು ಐದು ವರ್ಷ ಕಾಯುವುದಕ್ಕೆ ಹೇಳಿದ್ರು. ಅಧಿಕಾರಕ್ಕಾಗಿ ನಾನು ಹೊರಗೆ ಬರಲಿಲ್ಲ ಎಂದು ಹೇಳಿದ್ದಾರೆ.

GIPHY App Key not set. Please check settings