ಬೆಂಗಳೂರು: ಇ ಡಿ ಅಧಿಕಾರಿಗಳು ಮೊದಲು ಸಿದ್ದರಾಮಯ್ಯ ಅವರಿಗೆ ನೋಟೀಸ್ ನೀಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ರು. ಆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಅವರಿಗೆ ಪ್ರಜ್ಞಾವಂತಿಕೆ ಇಲ್ಲ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಅವರಿಗಿನ್ನು ಮೆಚ್ಯುರಿಟಿ ಬರಬೇಕು. 2016ರಲ್ಲಿ ನಾವೂ ಅಧಿಕಾರದಲ್ಲಿದ್ದಾಗ ಈ ಬಿಟ್ ಕಾಯಿನ್ ಕೇಸ್ ಇರಲಿಲ್ಲ. ಪ್ರಕರಣ ದಾಖಲಾದಾಗ ಹೋಂ ಮಿನಿಸ್ಟರ್ ಆಗಿದ್ದಿದ್ದು ಬಸವರಾಜ್ ಬೊಮ್ಮಾಯಿ, ಶ್ರೀಕಿಗೆ ಬೇಲ್ ಸಿಕ್ಕಾಗ ಹೋಂ ಮಿನಿಸ್ಟರ್ ಆಗಿದ್ದಿದ್ದು ಬೊಮ್ಮಾಯಿ ಅವರು. ಇದಕ್ಕೆಲ್ಲಾ ಅವರೇ ಉತ್ತರ ಕೊಡಬೇಕು.
ಪ್ರತಾಪ್ ಸಿಂಹ ಅವರ ಬಗ್ಗೆ ನಾನು ಮಾತನಾಡಲ್ಲ. ಅವರಿಗೆ ಇನ್ನು ಪ್ರಜ್ಞಾವಂತಿಕೆಯೂ ಬರಬೇಕು, ರಾಜಕೀಯದಲ್ಲಿ ಮೆಚ್ಯುರಿಟಿಯೂ ಬರಬೇಕು ಎಂದಿದ್ದಾರೆ.
ಬಿಟ್ ಕಾಯಿನ್ ಕೇಸ್ ನಲ್ಲಿ ಮೊದಲು ಟ್ವೀಟ್ ಮಾಡಿದ್ದು ಸಿದ್ದರಾಮಯ್ಯ ಅವರಿಗೆ ಇ ಡಿ ಅಧಿಕಾರಿಗಳು ನೋಟೀಸ್ ನೀಡಬೇಕು. ಆನಂತರ ಖರ್ಗೆ, ಸುರ್ಜೇವಾಲ ಅವರ ಮೇಲೂ ತನಿಖೆ ನಡೆಸಬೇಕೆಂದು ಪ್ರತಾಪ್ ಸಿಂಹ ಹೇಳಿದ್ದರು. ಇದೀಗ ಆ ವಿಚಾರಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.