ಬೆಂಗಳೂರು: ನಾವೂ ಈಶ್ವರಪ್ಪನ ವಿರುದ್ಧ ಪ್ರತಿಭಟನೆಗೆ ಹೋಗುತ್ತಿಲ್ಲ. ನಾವೂ ಇಡೀ ರಾಜ್ಯದ ಎಲ್ಲಾ ಕಡೆ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದೀವಿ. ಈಶ್ಚರಪ್ಪ ಅವರು ಏನು ಮಾಡಿದ್ದಾರೆ ಎಂಬುದನ್ನು ಸರ್ಕಾರ ಮುಚ್ಚಾಕುವುದಕ್ಕೆ ಪ್ರಯತ್ನ ಪಡುತ್ತಿದೆ. ಸಂತೋಷ್ ಪಾಟೀಲ್ ವಿಚಾರದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಬರವಣಿಗೆಯಲ್ಲಿ ಕೊಟ್ಟಿದ್ದಾರೆ ಬಹಳ ಸಂತೋಷ.
ಬಿಜೆಪಿ ಸರ್ಕಾರ ಏನೂ ವೈಫಲ್ಯ ಮಾಡಿದೆ ಅದನ್ನು ರಾಜ್ಯದ ಜನರ ಮುಂದಿಡಬೇಕು. ಆ ಸಂಬಂಧ ಎಲ್ಲಾ ಜಿಲ್ಲೆಯಲ್ಲೂ ಕಾರ್ಯಕ್ರಮ ಇಟ್ಟುಕೊಂಡಿದ್ದೋ. ನಾನು ಕೂಡ ಹುಬ್ಬಳ್ಳಿ ಧಾರವಾಡದ ಜವಬ್ದಾರಿ ಇತ್ತು. ಸಿದ್ದರಾಮಯ್ಯ ನವರು ಹಾಸನ, ಮಂಡ್ಯ, ಚಾಮರಾಜನಗರ, ಮೈಸೂರಿಗೆ ಹೋಗಿದ್ದರು. ನಾನು ಕೆಲವು ಕಡೆ ಹೋಗುವುದಕ್ಕೆ ಆಗಲಿಲ್ಲ. ಹುಬ್ಬಳ್ಳಿಗೇ ಹೋದಾಗ ಸ್ವಲ್ಪ ಕೋಮು ಗಲಭೆ ಇತ್ತು ಎಂದಿದ್ದಾರೆ.
ಇನ್ನು ಪರೀಕ್ಷಾ ಅಕ್ರಮದ ಬಗ್ಗೆ ಮಾತನಾಡಿದ ಡಿಕೆಶಿ, ಒಂದೇ ಅಲ್ಲ ಏನೇನು ನಡೆದಿದೆ ಈ ಸಂಬಂಧ ನಾನು ಸೋಮಶೇಖರ್ ಗೂ ಒಂದಿನ ಫೋನ್ ಮಾಡಿದ್ದೆ. ಬೆಮೆಲ್ ವಿಚಾರದಲ್ಲಿ. ಇಲ್ಲ ನಾನು ಪರಿಶೀಲನೆ ಮಾಡಿದ್ದೀನಿ ಏನು ಇಲ್ಲ ಎಂದಿದ್ದರು. ಆದರೆ ಬೇಕಾದಷ್ಟು ಮಾಹಿತಿ ನನಗೆ ಬರ್ತಾ ಇದೆ. ಯಾರಿಗೆ ಏನು ಎಂಬುದು. ಕೆಪಿಎಸ್ಸಿ ಇರಬಹುದು ಎಲ್ಲದರಲ್ಲೂ ಹಗರಣ ನಡೆದಿದೆ. ಒಂದು ದೊಡ್ಡ ಲೀಸ್ಟ್ ಮಾಡಿ ಯಾವ ಹುದ್ದೆಗೆ ಎಷ್ಟೆಷ್ಟು ಹಣ ಇದೆ ಎಂಬುದನ್ನು ದೊಡ್ಡ ಬೋರ್ಡ್ ಹಾಕಿ ಬಿಟ್ಟಿದ್ದಾರೆ. ಕೊಡಿ ನೋಟೀಸ್ ನೋಡೋಣಾ ನಿಮಗೆ ತಾಕತ್ತಿದ್ದರೆ ಸರ್ಕಾರಕ್ಕೆ. ನಿನ್ನೆ ಗೊಬ್ಬರದ ವಿಚಾರ ಬಂತು. ಹಣ ತೆಗೆದುಕೊಂಡು ತಮಿಳುನಾಡಿಗೆ ಕಳುಹಿಸಿದ್ದು. ರೈತರಿಗೆ ಎಲ್ಲಾ ಸೊಸೈಟಿಯಲ್ಲೂ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.