ಶಿವಮೊಗ್ಗ: ಜಿಲ್ಲೆಯಲ್ಲಿ ತಮ್ಮದೇ ಪಕ್ಷದ ಸಚಿವರ ವಿರುದ್ಧ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲು ಮಧು ಬಂಗಾರಪ್ಪ ಅಂತ ಒಬ್ಬರಿದ್ದರು. ಆದರೆ ಈಗ ಯಾರಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.
ಕೆಡಿಪಿ ಸಭೆಗೆ ನನಗೆ ಆಹ್ಚಾನ ನೀಡಿಲ್ಲ. ಜಿಲ್ಲ ಉಸ್ತುವಾರಿ ಸಚಿವ ಯಾರು ಎಂಬುದು ಗೊತ್ತಿಲ್ಲ. ಈ ಹಿಂದೆ ಮಧು ಬಂಗಾರಪ್ಪ ಅಂತ ಇದ್ರು. ಈಗ ಯಾರಿದ್ದಾರೋ ಗೊತ್ತಿಲ್ಲ. ಬಹುಶಃ ಅವರು ನನ್ನನ್ನು ವಿರೋಧ ಪಕ್ಷದ ನಾಯಕ ಎಂದುಕೊಂಡಿರಬೇಕು. ಹೆದರಿಕೊಂಡು ಹೋಗಲು ನಾನು ಕುಮಾರ ಬಂಗಾರಪ್ಪ ಅಲ್ಲ. ನಾನು ಬೇಳೂರು ಗೋಪಾಲಕೃಷ್ಣ. ನನ್ನ ಕ್ಷೇತ್ರದ ಅಭಿವೃದ್ಧಿ ಮೇಲೆ ಯಾವುದೇ ಪರಿಣಾಮ ಆಗಲ್ಲ. ನನಗೆ ಸಿಎಂ, ಡಿಸಿಎಂ ಬೆಂಬಲವಿದೆ ಎಂದಿದ್ದಾರೆ. ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ಮಧು ಬಂಗಾರಪ್ಪ, ಈ ಬಗ್ಗೆ ನಾನು ಮಾತನಾಡುವುದಕ್ಕೆ ಆಗಲ್ಲ. ಅವರಿಗೂ ಕೆಡಿಪಿ ಸಭೆಗೆ ಆಹ್ವಾನ ನೀಡಿದ್ದೆವು ಎಂದಿದ್ದಾರೆ.
ಈ ಸಂಬಂಧ ಸಂಸದ ಬಿವೈ ರಾಘವೇಂದ್ರ ಅವರು, ಗೋಪಾಲಕೃಷ್ಣ ಅವರು ಒಬ್ಬ ಹಿರಿಯ ಶಾಸಕರು. ಅವರಲ್ಲಿ ಅಧಿಕಾರಕ್ಕಾಗಿ ಪೈಪೋಟಿ ಇದೆ. ವಿಪಕ್ಷದವರನ್ನು ಯಾರು ಹೆಚ್ಚಾಗಿ ಬೈಯುತ್ತಾರೆ ಅವರಿಗೆ ಸ್ಥಾನ ಸಿಗುತ್ತದೆ ಅನ್ಸುತ್ತೆ, ನಾನು ಮತದಾರರಿಗೆ ಉತ್ತರ ಕೊಡೋದು. ನನಗೆ ಮತ ಕೊಟ್ಟಿರುವವರು ಮತದಾರರು, ನಾನು ಅವರಿಗೆ ನಿಷ್ಠೆ ಇರುವರು ಎಂದು ತಿಳಿಸಿದ್ದಾರೆ.