ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ : ಏಳಿಗೆ ಸಹಿಸದವರಿಗೆ ದರ್ಶನ್ ಖಡಕ್ ತಿರುಗೇಟು

1 Min Read

ವರ್ಷದ ಕೊನೆಯಲ್ಲಿ ರಿಲೀಸ್ ಆದ ಕಾಟೇರ ಸಿನಿಮಾ ಇನ್ನು ಅಬ್ಬರಿಸುತ್ತಲೆ ಇದೆ. ಒಂದೇ ವಾರಕ್ಕೆ ದರ್ಶನ್ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ. ಇದು ಕನ್ನಡಿಗರಿಗೆಲ್ಲ ಹೆಮ್ಮೆಯ ವಿಚಾರವೇ ಸರಿ. ನಾನ್ ಪ್ಯಾನ್ ಇಂಡಿಯಾ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿರುವುದು ಎಲ್ಲರಿಗೂ ಖುಷಿ ನೀಡಿದೆ. ಇದರ ನಡುವೆ ನಟ ದರ್ಶನ್ ಹಿತ ಶತ್ರುಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

 

ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ ಎಂದು ಟ್ವೀಟ್ ಮಾಡಿದ್ದಾರೆ.

 

ಕಾಟೇರ ಸಿನಿಮಾ ಪೈರಸಿ ಮಾಡಿದವರಿಗೂ ಈಗಾಗಲೇ ಬಿಸಿ ಮುಟ್ಟಿಸಲಾಗಿದೆ. ಪೈರಸಿ ಮಾಡುತ್ತಿರುವವರ ಸೂಚನೆ ಕೊಟ್ಟರೆ ಸಾಕು, ಅವರನ್ನು ಮಟ್ಟ ಹಾಕಲಾಗುತ್ತಿದೆ. ಕಾಟೇರ ಸಿನಿಮಾ ಕನ್ನಡದ ಸಿನಿಮಾ. ಪ್ಯಾನ್ ಇಂಡಿಯಾ ಕಾಲದಲ್ಲಿ ಕನ್ನಡದಲ್ಲಿ ರಿಲೀಸ್ ಆಗಿ ಗೆದ್ದಂತ ಸಿನಿಮಾ ಕಾಟೇರ. ವಿದೇಶಗಳಲ್ಲೂ ಈಗ ಸದ್ದು ಮಾಡಯತ್ತಿದೆ. ಬಾಕ್ಸ್ ಆಫೀಸ್ ಸುಲ್ತಾನನ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.

Share This Article
Leave a Comment

Leave a Reply

Your email address will not be published. Required fields are marked *