ಶಿವಮೊಗ್ಗ: ನಮ್ಮ ಇಲಾಖೆಯಲ್ಲಿ ನನ್ನ ನಿರೀಕ್ಷೆ ಮೀರಿ ಕೆಲಸವಾಗಿದೆ. ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಳೆ ನೀರು ಸಮುದ್ರದಲ್ಲಿ ಹೋಗುವ ಬದಲು, ಭೂಮಿಯಲ್ಲಿ ಹೋಗುವಂತೆ ಮಾಡುವ ಯೋಜನೆ ಕೊಟ್ಟಿದ್ದರು. ಆ ಜಲಧಾರೆ ಯೋಜನೆ ಕರ್ನಾಟಕದಲ್ಲಿ ನಾವೂ ಮೊದಲ ಸ್ಥಾನದಲ್ಲಿದ್ದೀವಿ. ಅನ್ನೋದು ನಮ್ಮ ಹೆಮ್ಮೆ. ನಾನು ಮೊನ್ನೆ ದೆಹಲಿ ಹೋಗಿದ್ದೆ, ಬಡವರಿಗೆ ಉದ್ಯೋಗ ಸೃಷ್ಟಿ ಮಾಡುವ ನರೇಗಾ ಯೋಜನೆ ಇದೆಯಲ್ಲ ಆ ಯೋಜನೆಯಲ್ಲಿ ಬಹಳ ವೇಗವಾಗಿ ಕೆಲಸವಾಗುತ್ತಿದೆ.
ಯಡಿಯೂರಪ್ಪ, ಬೊಮ್ಮಾಯಿ, ರಾಜ್ಯದ ಎಲ್ಲಾ ಮಂತ್ರಿಗಳು, ಶಾಸಕರು, ಕಾರ್ಯಕರ್ತರು, ಸ್ವಾಮೀಜಿಗಳು ಇಷ್ಟೊಂದು ನನ್ನ ಮೇಲೆ ಪ್ರೀತಿ ತೋರಿಸುತ್ತಾ ಇರುವುದಕ್ಕೆ ನಿಜಕ್ಕೂ ನಾನು ಭಾವುಕನಾಗಿದ್ದೇನೆ. ನಂಗೆ ಇಷ್ಟೊಂದು ಪ್ರೀತಿ ಸಿಗುವ ಕಲ್ಪನೆ ಇರಲಿಲ್ಲ. ಹೀಗಾಗಿ ಆ ಷಡ್ಯಂತ್ರ ಮಾಡಿದ ವ್ಯಕ್ತಿಗಳಿಗೆ ಗೊತ್ತಾಗಬೇಕು. ಈ ಎಲ್ಲರ ಪ್ರೀತಿಯಿಂದಲೇ ನನಗೆ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇದೆ.
ನೂರಾರು ಹೆಣ್ಣು ಮಕ್ಕಳು ಇವತ್ತು ಅಳುತ್ತಿದ್ದಾರೆ ಎಂದರೆ ಅಣ್ಣ ತಂಗಿಯ ಸಂಬಂಧ. ನಮ್ಮ ಅಣ್ಣನ ಮೇಲೆ ಸುಖಾ ಸುಮ್ಮನೆ ಆರೋಪ ಬಂದಿದೆ, ಷಡ್ಯಂತ್ರ ನಡೆಸಿದ್ದಾರೆ ಅಂತ ಅಳುತ್ತಾ ಇದ್ದಾರೆ. ಹೀಗೆ ಅಳುವುದು ಚಂದನಾ ಅಂತ ಕೇಳಿದಾಗ ಆರೋಪಮುಕ್ತವಾಗಿ ಬನ್ನಿ ಅಂತ ಹರಸಿದ್ದಾರೆ. ಅವರೆಲ್ಲರ ಹಾರೈಕೆಯಿಂದ ಖಂಡಿತ ಷಡ್ಯಂತ್ರದಿಂದಲೂ ಹೊರ ಬರುತ್ತೇನೆ, ಆರೋಪ ಮುಕ್ತವಾಗುತ್ತೇನೆ ಎಂಬ ನಂಬಿಕೆ ಇದೆ.
ಇಡೀ ದೇಶದಲ್ಲಿ ಅನೇಕ ದೇವಸ್ಥಾನಗಳಿಗೆ ಹೋಗಿದ್ದೇನೆ. ಹೋದಂತ ದೇವಸ್ಥಾನದಲ್ಲೂ ಅಲ್ಲೊಂದು ಇಲ್ಲೊಂದು ಅಂತ ಪ್ರಸಾದ ಆಗುತ್ತಾ ಇರುತ್ತದೆ. ಆದರೆ ಇವತ್ತು ಗಣಪತಿ ಪೂಜೆ ಮಾಡಿಸುವಾಗ ಬಲಗಡೆಯಿಂದ ಬಿದ್ದಂತ ಹೂ ನನ್ನ ಜೀವನದಲ್ಲಿ ನಾನು ನೋಡಿಲ್ಲ. ಹೀಗಾಗಿ ನಾನು ನ್ಯಾಯಯುತವಾಗಿದ್ದೀನಿ, ಧರ್ಮಕ್ಕೆ ಜಯ ಸಿಗುತ್ತೆ, ಆ ಗಣಪತಿ ಕೂಡ ನಮ್ಮ ಜೊತೆ ಇದ್ದಾನೆ ಅನ್ನೋ ವಿಶ್ವಾಸ ಸಿಕ್ಕಿದೆ ಎಂದಿದ್ದಾರೆ.