ತುಮಕೂರು: ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡೋದಂತು ಕನ್ಫರ್ಮ್ ಆಗಿದೆ. ಆದರೆ ಸಿಎಂ ಹುದ್ದೆಯ ಅಭ್ಯರ್ಥಿಯದ್ದೇ ದೊಡ್ಡ ತಲೆನೊವಾಗಿ ಪರಿಣಮಿಸಿದೆ. ಸಿದ್ದು, ಡಿಕೆಶಿ ಇಬ್ಬರ ನಡುವೆ ಈಗ ಡಾ ಜಿ ಪರಮೇಶ್ವರ್ ಕೂಡ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ಈ ಹಿಂದೆ ಸಿಎಂ ಸ್ಥಾನಕ್ಕೆ ಜಿ ಪರಮೇಶ್ವರ್ ಅವರ ಹೆಸರು ಸಾಕಷ್ಟು ಬಾರಿ ಬಂದು ಹೋಗಿದೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಮತ್ತೊಮ್ಮೆ ಸಿಎಂ ಹುದ್ದೆಯ ಕನಸು ಬಿಚ್ಚಿಟ್ಟಿದ್ದಾರೆ.
ಯಾವುದೇ ಬೇಡಿಕೆ ಇಡದೆ ಸುಮ್ಮನೆ ಇದ್ದೇನೆ ಅಂದ್ರೆ ನಾನು ಅಸಮರ್ಥ ಎಂದು ಅರ್ಥವಲ್ಲ. ನನಗೆ ರಾಜಕೀಯದ ಬಗ್ಗೆಯೂ ಗೊತ್ತಿದೆ. ಜೊತೆಗೆ ಪಕ್ಷದ ಪರಿದಿಯ ಬಗ್ಗೆಯೂ ಅರಿವಿದೆ. ನನಗೂ 50 ಶಾಸಕರನ್ನು ದೆಹಲಿಗೆ ಕರೆದುಕೊಂಡು ಹೋಗುವ ಸಾಮರ್ಥ್ಯವಿದೆ. ಆದರೆ ನನಗೆ ನನ್ನದೇ ಆದ ಮೌಲ್ಯಗಳಿವೆ.
ಸಿಎಂ ಆಯ್ಕೆ ವಿಚಾರವನ್ನು ನಾನು ವರಿಷ್ಠರಿಗೆ ಬಿಟ್ಟಿದ್ದೇನೆ. ಹೈಕಮಾಂಡ್ ಸಿಎಂ ಜವಬ್ದಾರಿ ಕೊಟ್ಟರೆ ನಿಭಾಯಿಸುವ ಶಕ್ತಿ ನನಗಿದೆ. ಅವಕಾಶ ಕೊಟ್ಟರೆ ಬೇಡ ಎನ್ನುವ ಮಾತೇ ಇಲ್ಲ ಎಂದಿದ್ದಾರೆ.