ನಾನೂ ಕೂಡಾ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ : ಎಸ್.ಸುನೀಲ್ ಕುಮಾರ್

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,ನ.09 : ಎಸ್ಸಿ ಮೀಸಲು ಕ್ಷೇತ್ರವಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೆನೆ ಎಂದು ಎಸ್.ಸುನೀಲ್ ಕುಮಾರ್ ಹೇಳಿದ್ದಾರೆ.

ನಗರದ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಕಾಂ ವ್ಯಾಸಾಂಗ ಮಾಡಿರುವ ನಾನು, ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ದುಡಿದಿದ್ದೆನೆ, ಅಲ್ಲದೆ ಯುವ ಕಾಂಗ್ರೇಸ್ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು, ಎನ್ ಎಸ್ ಯು ಐ ನಲ್ಲಿ ಕೆಲಸ ಮಾಡಿದ್ದೇನೆ.

ಚಿತ್ರದುರ್ಗದ ಗೋಪಾಲಪುರ ಬಡಾವಣೆಯಲ್ಲಿ ನಮ್ಮ ತಾತನವರು ವಾಸವಿದ್ದು, ಮೂಲತಃ ನಾನು ಚಿತ್ರದುರ್ಗದನಾದ ನಾನು ವ್ಯವಹಾರಿಕ ದೃಷ್ಠಿಯಿಂದ ಬೆಂಗಳೂರಲ್ಲಿ ನೆಲೆಸಿರುವುದಾಗಿ ತಿಳಿಸಿದರು.

ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ರಾಜಕೀಯ ಪ್ರವೇಶ ಮಾಡಿದ್ದೇನೆ. ಪಕ್ಷದ ವರಿಷ್ಟರನ್ನು‌ ಈಗಾಗಲೇ ಭೇಟಿ ಮಾಡಿದ್ದು, ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಜಿಲ್ಲೆಯ 8 ಜನ ಶಾಸಕರನ್ನು ಭೇಟಿ ಮಾಡಿದ್ದು, ಆಶಿರ್ವಾದ ಮಾಡುವ ಭರವಸೆ ನೀಡಿದ್ದಾರೆ ಎಂದರು.

ಭೋವಿ ಸಮಾಜದ ಸ್ವಾಮೀಜಿಯವರನ್ನು ಭೇಟಿ‌ ಮಾಡಿದ್ದು, ಶ್ರೀಗಳು ಸಹ ಚಿತ್ರದುರ್ಗ‌ ಲೋಕಸಭಾ ಕ್ಷೇತ್ರಕ್ಕೆ ಭೋವಿ ಜನಾಂಗವರಿಗೆ ಟೀಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಹಾಗಾಗಿ ನನಗೆ ಹೈಕಮಾಂಡ್ ಟೀಕೆಟ್ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಾರೆಡ್ಡಿ, ಚೆನ್ನಪ್ಪ, ತುಳಸಿ ರಮೇಶ್, ಸುಧಾ ಶ್ರೀನಿವಾಸ್, ಬ್ಲಾಕ್ ಕಾಂಗ್ರೇಸ್ ಸದಸ್ಯರು ಗೋಪಾಲ್ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *