ಮೈಸೂರು: ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ವಿರುದ್ಧ ಅಭಿವೃದ್ಧಿ ವಿಚಾರಕ್ಕೆ ಗುಡುಗಿದ್ದಾರೆ. ಅಭಿವೃದ್ಧಿಯ ರಾಜಕಾರಣ ಮಾಡುತ್ತಿರುವುದಕ್ಕೆ ನಾನೇ ಟಾರ್ಗೆಟ್ ಆಗಿದ್ದೀನಿ ಎಂದು ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ. ನಾನು ಸೋಮಾರಿ ಸಿದ್ದನ ರೀತಿ ಸುಮ್ಮನೆ ಕುಳಿತುಕೊಂಡು ಜಾತಿ ರಾಜಕಾರಣ ಮಾಡಿಲ್ಲ. ಅಭಿವೃದ್ಧಿಯ ರಾಜಕಾರಣ ಮಾಡುತ್ತಿದ್ದೇನೆ. ಹೀಗಾಗಿ ನಾನೇ ಟಾರ್ಗೆಟ್ ಆಗಿದ್ದೀನಿ ಎಂದಿದ್ದಾರೆ.
ಹುಣಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಅವರು ಅಭದ್ರತೆಯಿಂದ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ 28 ಸಂಸದರಿದ್ದಾರೆ. ಆದರೆ ಪ್ರತಾಪ್ ಸಿಂಹನ ಮೇಲೆ ಮಾತ್ರ ಯಾಕೆ ದಾಳಿ ನಡೆಸುತ್ತಿರುವುದು. ಸಿದ್ದರಾಮಯ್ಯ ಅವರೇ ಅಭಿವೃದ್ಧಿ ಇಟ್ಟುಕೊಂಡು ರಾಜಕಾರಣ ಮಾಡಿ. ಈ ರೀತಿಯ ದ್ವೇಷದ ರಾಜಕಾರಣ ಮಾಡಬೇಡಿ. ಸಿದ್ದರಾಮಯ್ಯ ಅವರು 40 ವರ್ಷದಿಂದ ರಾಜಕಾರಣ ಮಾಡುತ್ತಿದ್ದಾರೆ. ಏನು ಮಾಡಿದ್ದಾರೆ ಹೇಳಿ. ಬಡವರ ಮಕ್ಕಳು ರಾಜಕಾರಣ ಮಾಡಬಾರದಾ..? ನನ್ನ ಮೇಲೆ ಕಾಂಗ್ರೆಸ್ ಯಾಕಷ್ಟು ದ್ವೇಷ ಎಂದು ಪ್ರಶ್ನೆ ಕೇಳಿದ್ದಾರೆ.
ನಾನು ಯಾವತ್ತು ನೀನು ಗೌಡ, ಕುರುಬ, ಲಿಂಗಾಯತ ಅಂತ ಜಾತಿ ರಾಜಕಾರಣ ಮಾಡಿಲ್ಲ. ಹೀಗಾವಿಯೇ ನಿರಂತರವಾಗಿ ನನ್ನ ಮೇಲೆ ದಾಳಿ ನಡೆಯುತ್ತಿದೆ. ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತ ಕೂಡಲೇ ಖುರ್ಚಿ ಅಲುಗಾಡುತ್ತಿದೆ. ಇದೆ ಕಾರಣಕ್ಕೆ ಸದಾ ನನ್ನ ಮೇಲೆ ದಾಳಿ ನಡೆಸುತ್ತಿದ್ದಾರೆ. ಸಂಸತ್ ಘಟನೆಯ ಬಳಿಕ ಕಾಂಗ್ರೆಸ್ ನನ್ನ ಮೇಲೆ ದಾಳಿ ಜಾಸ್ತಿ ಮಾಡುತ್ತಿದೆ. ಕಾರ್ಯಕರ್ತನಿಂದ ಹಿಡಿದು ಸಿಎಂ ಪುತ್ರನ ತನಕ ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದಿದ್ದಾರೆ.