ಹಾಸನ: ಯಶ್ ಅವರ ತಾಯಿ ಪುಷ್ಪಾ ಅವರು ಮನೆಯ ಬಳಿ ಜಾಗ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಹಾಕಿದ್ದರು ಎನ್ನಲಾಗಿತ್ತು. ಕೋರ್ಟ್ ನಿಂದಲೇ ಆರ್ಡರ್ ತರಿಸಿ, ಅದನ್ನ ಹೊಡೆದು ಹಾಕಲಾಗಿದೆ. ಇದಿಒಗ ಯಶ್ ಅವರ ತಾಯಿ ನೇರಾ ನೇರ ಜಗಳಕ್ಕೆ ನಿಂತಿದ್ದಾರೆ. ಸೈಟ್ ಗೆ ಬಂದು ರೌಡಿಸಂ ಮಾಡ್ತೀಯಾ. ಆ ಯಮ್ಮ ಎಲ್ಲಿ ಹೋಗಿದ್ಲು ಇಷ್ಟು ದಿನ. ಇದು ನಂದು. ಡೆಮಾಲಿಶ್ ಯಾಕ್ ಮಾಡಿದ್ದು ಎಂದು ಅವಾಜ್ ಹಾಕಿದ್ದಾರೆ. ಯಶ್ ಅವರ ಅಮ್ಮ ಜಾಗವನ್ನ ಒತ್ತುವರಿ ಮಾಡಿಕೊಂಡಿದ್ದಾರೆ ಅಂತ ನನ್ನ ಮಗ ಹೆಸರೇಳಿದ್ಯಲ್ಲ, ಈಗ ತೋರಿಸು ಆ ಜಾಗವನ್ನ ಅಂತ ಧಮ್ಕಿ ಹಾಕಿದ್ದಾರೆ.
ಪುಷ್ಪಾ ಅವರ ಮಾತುಗಳಿಗೆ ಬೇಸರ ಮಾಡಿಕೊಂಡ ದೇವರಾಜ್, ಆ ರೀತಿಯೆಲ್ಲಾ ಮಾತನ್ನಾಡಬೇಡಿ. ನಾನೊಬ್ಬ ಮಾಸ್ಟರ್ ಮಗ. ನನಗೂ ಗೌರವವಿದೆ. ನಮ್ಮ ಅಪ್ಪ ಹದಿನಾರು ಜನರಿಗೆ ವಿದ್ಯೆ ಕಲಿಸವ್ರೆ. ಸ್ಥಾನ – ಮಾನ – ಗೌರವ ಇದೆ. ಬಡವರಾಗಿದ್ರು ಕೂಡ ಮರ್ಯಾದೆ ಇದೆ. ಕೋರ್ಟ್ ನಲ್ಲಿ ಉತ್ತರ ಕೊಡ್ತೇನೆ ಎಂದಿದ್ದಾರೆ. ಇದೇ ವೇಳೆ ಮಾಧ್ಯಮದವರನ್ನು ಪ್ರಶ್ನೆ ಮಾಡಿದ ಪುಷ್ಪಾ, ಯಾರೀ ನಿಮ್ಮನ್ನ ಕರೆಸಿದ್ದು. ಇವ್ರೇನಾ ಅಂತ ಪ್ರಶ್ನೆ ಮಾಡಿದ್ದಾರೆ. ನೀನು ಜೈಲಲ್ಲಿರಬೇಕಿತ್ತು. ಕಳ್ಳನ ಥರ ಯಾರು ಇಲ್ಲದ ಸಮಯ ನೋಡಿಕೊಂಡು ಬಂದು ಹೊಡೆದಾಕಿದ್ದೀಯಾ. ಎಷ್ಟು ಕೋಟಿ ಕೊಟ್ಟು ಈ ಸೈಟ್ ತಗೊಂಡಿದ್ದೀಯಾ. ರೌಡಿಸಂ ಮಾಡ್ತೀರಾ ಇಲ್ಲಿಗೆ ಬಂದು ಅಂತ ದೇವರಾಜು ಮೇಲೆ ಹೌಹಾರಿ ಬಿದ್ದಿದ್ದಾರೆ ಯಶ್ ಅವರ ತಾಯಿ ಪುಷ್ಪಾ.

