ನಾನು ಹಿಂದೂ, ಹಿಂದುತ್ವವಾದಿ ಅಲ್ಲ : ರಾಹುಲ್ ಗಾಂಧಿ..!

ಜೈಪುರ: ರಾಜಸ್ಥಾನದ ಜೈಪುರದಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾಗಿದ್ದರು. ಈ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ನಾನು ಹಿಂದೂ, ಹಿಂದುತ್ವವಾದಿಯಲ್ಲ. ಹಿಂದುತ್ವವಾದುಗಳು ಕೊಲೆಯನ್ನು ಮಾಡಲು ಹಿಂಜರಿಯಲ್ಲ ಎಂದಿದ್ದಾರೆ.

ಹಿಂದುತ್ವವಾದಿಗಳು ಅಧಿಕಾರಕ್ಕಾಗಿ ಯಾರನ್ನು ಬೇಕಾದರೂ ಕೊಲ್ತಾರೆ. ಏನು ಬೇಕಾದ್ರೂ ಮಾಡ್ತಾರೆ. ದೇಶದಲ್ಲಿ ಎರಡು ಪದಗಳ ನಡುವೆ ಘರ್ಷಣೆ ನಡೆಯುತ್ತಿದೆ. ಒಂದು ಹಿಂದು ಮತ್ತೊಂದು ಹಿಂದುತ್ವ. ಈ ಎರಡು ಪದಗಳ ಅರ್ಥ ಬೇರೆ ಬೇರೆ.

ನಾನು ಹಿಂದು ಆದರೆ ಹಿಂದುತ್ವವಾದಿಯಲ್ಲ. ಹಿಂದು ಯಾವಾಗಲೂ ಸತ್ಯವನ್ನು ಹುಡುಕುವ ಕೆಲಸ ಮಾಡಿದ್ರೆ , ಹಿಂದುತ್ವವಾದಿಗಳು ಯಾವಾಗಲೂ ಅಧಿಕಾರ ಹುಡುಕಲು ಯತ್ನಿಸುತ್ತಾರೆ. ಹಾಗಾಗಿ ನಾನು ಹಿಂದು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *