ಚಿಕ್ಕಮಗಳೂರು: ಶೃಂಗೇರಿಯ ಶಾರಾದಾಪೀಠಕ್ಕೆ ಸಚಿವ ಸುನೀಲ್ ಕುಮಾರ್ ಅವರು ಕುಟುಂಬ ಸಮೇತ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ದತ್ತಪೀಠದ ಹೋರಾಟದ ಬಗ್ಗೆ ಸಚಿವ ಸುನಿಲ್ ಕುಮಾರ್ ಮಾತನಾಡಿ, ನಾನೊಬ್ಬ ದತ್ತಪೀಠದ ಹೋರಾಟಗಾರ. ಹಿಂದೂಗಳ ಪೀಠವಾಗುವವರೆಗೂ ನಾನು ಹೋರಾಟ ಬಿಡುವುದಿಲ್ಲ ಎಂದಿದ್ದಾರೆ.
ಕಾನೂನು ತಜ್ಞರ ಸಲಹೆಯಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡಲಾಗುತ್ತದೆ. ಮತ್ತು ಪರಂಪರೆಯಂತೆ ಪೂಜೆ ಪುನಸ್ಕಾರಗಳು ನಡೆಯುವಂತೆ ನೋಡಿಕೊಳ್ಳುತ್ತೇವೆ. ನಾನು ಅಂದಿನಿಂದ ಇಂದಿನವರೆಗೂ ದತ್ತಪೀಠದ ಹೋರಾಟಗಾರ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ದತ್ತಪೀಠ ಹಿಂದೂಗಳದ್ದಾಗಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಕಾನೂನಿನ್ವಯ ಕೈಗೊಳ್ಳಬೇಕಾದ ಎಲ್ಲಾ ಕ್ರಮವನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ. ಅಂದುಕೊಂಡಿದ್ದನ್ನು ಶೀಘ್ರವೇ ಮಾಡಲಾಗುತ್ತದೆ. ಅರ್ಚಕರನ್ನು ನೇಮಿಸಲಾಗುತ್ತದೆ ಎಂದಿದ್ದಾರೆ.