ಬೆಂಗಳೂರು: ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ರಾಜ್ಯದಲ್ಲಿ ಭುಗಿಲೆದ್ದಿದೆ. ಹೈಕೋರ್ಟ್ ನಲ್ಲಿ ಈ ಸಂಬಂಧ ವಿಚಾರಣೆ ನಡೀತಾ ಇದೆ. ಹೈಕೋರ್ಟ್ ನಲ್ಲಿ ಹಿಜಾಬ್ ಪರ ವಾದ ಮಂಡಿಸಿದ ವಕೀಲ ನಾನೊಬ್ಬ ಬ್ರಾಹ್ಮಣ ಎಂದು ಹೇಳಿಕೊಂಡಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠದಲ್ಲಿ ವಿಚಾರಣೆಯ ನಡೆಯುತ್ತಿದೆ. ಹಿಜಾಬ್ ಅರ್ಜಿದಾರರ ಪರ ದೇವದತ್ ಕಾಮತ್ ವಾದ ಮಂಡಿಸುತ್ತಿದ್ದಾರೆ. ಈ ವೇಳೆ ನಾನೋರ್ವ ಬ್ರಾಹ್ಮಣ. ನನ್ನ ಮಗ ನಾಮ ಹಾಕಿಕೊಂಡು ಶಾಲೆಗೆ ಹೋಗುತ್ತಾನೆ. ಇದನ್ನ ತಪ್ಪು ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಹಿಜಾಬ್ ಧರಿಸಿದ್ದಾರೆಯಷ್ಟೇ. ಅದರಿಂದ ಯಾರಿಗೂ ತೊಂದರೆಯಾಗಲಿ, ಸಮಸ್ಯೆಯಾಗಲಿ ಮಾಡಿಲ್ಲ. ಹಿಜಾಬ್ ಧರಿಸುವುದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ರಾಜ್ಯ ಸರ್ಕಾರ ಹೇಳುವ ಹಾಗಿಲ್ಲ. ಯಾಕಂದ್ರೆ ನಮ್ಮ ಧಾರ್ಮಿಕ ನಂಬಿಕೆಯನ್ನು ನಾವೂ ಪಾಲನೆ ಮಾಡುತ್ತಿದ್ದೇವೆ ಅಷ್ಟೇ ಎಂದಿದ್ದಾರೆ.