ಏನೇ ಮಾತಾಡುವಾಗಲೂ ನಾಲಿಗೆಯ ಮೇಲೆ ಎಚ್ಚರವಿರಬೇಕು. ಆಟವೇ ಬೇರೆ, ಧರ್ಮವೇ ಬೇರೆ, ವೈಯಕ್ತಿಕ ಜೀವನವೇ ಬೇರೆ. ಆಟದ ವಿಚಾರಕ್ಕೆ ಆತ ವಿಕೃತ ಮನಸ್ಥಿತಿಯವ ಕೊಹ್ಲಿಯ ಆ ಪುಟ್ಟ ಮಗಳನ್ನ ಎಳೆ ತಂದಿದ್ದ. ಇದೀಗ ಮುಂಬೈ ಪೊಲೀಸರು ತಮ್ಮ ಸಾಮರ್ಥ್ಯ ತೋರಿಸಿ, ಆತನಿಗೆ ಬಿಸಿ ಮುಟ್ಟಿಸಿದ್ದಾರೆ.
ಟೀ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕೋಮು ದಾಳಿ ನಡೆಸಿದ್ದನ್ನು ಯಾರು ಮರೆತಿರೋಲ್ಲ. ಆಗ ಇಡೀ ಟೀಂ ಇಂಡಿಯಾ ನಾಯಕರು ಶಮಿ ಪರವಾಗಿ ನಿಂತಿದ್ದರು. ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಸೆಹ್ವಾಗ್ ಸೇರಿದಂತೆ ಹಲವರು ಶಮಿ ಪರವಾಗಿ ಮಾತಾಡಿದ್ದರು. ಕೊಹ್ಲಿ ಕೂಡ ಅದನ್ನೇ ಜಪಿಸಿದ್ದರು.
ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಆಕ್ರಮಣ ಮಾಡುವುದು ಒಬ್ಬ ಮನುಷ್ಯ ಮಾಡುವ ಹೀನಾಯ ಕೃತ್ಯ. ಏಕೆಂದರೆ ಧರ್ಮ ಎಂಬುದು ಅತ್ಯಂತ ಪವಿತ್ರ ಮತ್ತು ವೈಯುಕ್ತಿಕ ವಿಷಯವಾಗಿದೆ. ಯಾವುದೇ ವ್ಯಕ್ತಿಯನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಬಾರದು ಎಂದು ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಹೇಳಿದರು. ಅಷ್ಟೇ ಅಲ್ಲದೆ ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಪ್ರಮುಖ ಭಾಗ. ಅವರು ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇಂತಹ ಟೀಕೆಗಳನ್ನು ಮಾಡುವವರಿಗಾಗಿ ನನ್ನ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ನಾವು ಶಮಿ ಜೊತೆ ಶೇಕಡಾ 200 ರಷ್ಟು ನಿಲ್ಲುತ್ತೇವೆ ಎಂದಿದ್ದರು. ಆಗ ಕೊಹ್ಲಿ ವಿರುದ್ಧ ರೊಚ್ಚಿಗೆದ್ದಿದ್ದ ಕಿಡಿಗೇಡಿಗಳು ಕೊಹ್ಲಿ ನಿಂದಿಸುವ ಬರದಲ್ಲಿ ಆ ಪುಟಾಣಿ 10 ತಿಂಗಳ ಮಗಳ ಬಗ್ಗೆ ಮಾತನಾಡಿದ್ದ. ಅತ್ಯಾಚಾರದ ಬೆದರಿಕೆ ಹಾಕಿದ್ದ.
ಸೋಷಿಯಲ್ ಮೀಡಿಯಾ ಜಾಡು ಹಿಡಿದು ಹೊರಟ ಮುಂಬೈ ಸೈಬರ್ ಸೆಲ್ ಪೊಲೀಸರು, ಇದೀಗ ಆ ಕೀಚಕನನ್ನ ಬಂಧಿಸಿದ್ದಾರೆ. 23 ವರ್ಷದ ರಾಮನಾಗೇಶ್ ಎಂಬಾತನೆ ಈ ರೀತಿ ಕಮೆಂಟ್ ಹಾಕಿದ್ದದ್ದು. ಈತ ಇಂಜಿನಿಯರಿಂಗ್ ವಿದ್ಯಾರ್ಥಿ ಕೂಡ.