ವಿಜಯನಗರ: ಮನುಷ್ಯನಿಗಿಂತ ಪ್ರಾಣಿಗಳೇ ಮೇಲೂ ಅನ್ನೋದು ಆಗಾಗ ಪ್ರೂವ್ ಆಗ್ತಾನೆ ಇರುತ್ತೆ. ಮನುಷ್ಯನಿಗೆ ನೀನೆ ಎಷ್ಟೇ ಉಪಕಾರ ಮಾಡಿದರೂ ಅದನ್ನ ಯಾವಾಗಲಾದರೂ ಒಮ್ಮೆ ಮರೆತು ಬಿಡುತ್ತಾರೆ. ಆದರೆ ಪ್ರಾಣಿಗಳು ಹಂಗಲ್ಲ. ಯಾರೋ ಒಬ್ಬರು ಹೊಟ್ಟೆಗೆ ಊಟ ಹಾಕಿದರೂ ಎಂದರೆ, ಅವರನ್ನು ಯಾವತ್ತಿಗೂ ಮರೆಯುವುದಿಲ್ಲ. ಅವರ ಹಿಂದೆಮುಂದೆಯೇ ಓಡಾಡುತ್ತವೆ. ನಿಶ್ವಲ್ಮಶ ಪ್ರೀತಿಯಷ್ಟೇ ಪ್ರಾಣಿಗಳಿಗೆ ಗೊತ್ತಾಗುವುದು.
ಈಗ ಪ್ರಾಣಿಯ ಮತ್ತೊಂದು ಪ್ರೀತಿ ಅನಾವರಣವಾಗಿದೆ. ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಕೋತಿ ನಡೆದುಕೊಂಡ ರೀತಿಗೆ ಎಲ್ಲರಿಗೂ ಕಣ್ತುಂಬಿ ಬಂದಿದೆ. ಪ್ರತಿನಿತ್ಯ ಕಾಳಜಿ ತೋರಿಸುತ್ತಿದ್ದ ತಾತನನ್ನು ಕಳೆದುಕೊಂಡ ಕೋತಿ ಕಣ್ಣೀರು ಹಾಕುತ್ತಾ ಕೂತಿದೆ.
ಹಳೆ ಹಗರಿಬೊಮ್ಮನಹಳ್ಳಿಯಲ್ಲಿ 88 ವರ್ಷದ ಪರಶುರಾಮ್ ಷಾ ಎಂಬ ವೃದ್ಧ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರೆಲ್ಲಾ ತಾತನನ್ನು ಕಳೆದುಕೊಂಡ ದುಃಖದಲ್ಲಿದ್ದರು. ಈ ವೇಳೆ ಅಲ್ಲಿಗೆ ಬಂದ ಕೋತಿ, ತಾತನ ಹಣೆಗೆ ಮುತ್ತಿಟ್ಟು, ಅಂತಿಮ ವಿದಾಯ ಹೇಳಿದೆ. ಕಳೆದ ಎರಡು ತಿಂಗಳಿನಿಂದ ಪರಶುರಾಮ್, ಈ ಕೋತಿಗೆ ಪ್ರತಿನಿತ್ಯ ಬಾಳೆ ಹಣ್ಣು ನೀಡುತ್ತಿದ್ದರು. ಹುಟ್ಟುಹಬ್ಬವಾದ ಮರುದಿನವೇ ಪರಶುರಾಮ್ ನಿಧನರಾಗಿದ್ದಾರೆ. ಅದರಲ್ಲೂ ಶ್ರೀರಾಮನವಮಿಯಂದೇ ನಿಧನರಾಗಿದ್ದರು. ಈ ಫೋಟೋ, ವಿಡಿಯೋ ವೈರಲ್ ಆಗಿದೆ. ಕೋತಿಯ ಪ್ರೀತಿ ಕಂಡು ಜನ ಕೂಡ ಭಾವುಕರಾಗಿದ್ದಾರೆ.