ಬೆಂಗಳೂರು: ಕಳೆದ ಜೆಲವು ದಿನದಿಂದ ಇಳಿಕೆಯತ್ತಲೇ ಸಾಗುತ್ತಿದ್ದ ಚಿನ್ನದ ದರ ಈಗ ಏರಿಕೆಯತ್ತ ಮುಖ ಮಾಡಿದೆ. ಜನವರಿ ತಿಂಗಳಲ್ಲಿ ಮತ್ತಷ್ಟು ಏರಿಕೆಯಗುವ ಸಾಧ್ಯತೆ ಇದೆ. ಇಂದು ಕೂಡ 25 ರೂಪಾಯಿ ಅಷ್ಟು ಏರಿಕೆಯಾಗಿದೆ. ಈ ಮೂಲಕ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರಟ್ ನ ಒಂದು ಗ್ರಾಂ 7,150 ರೂಪಾಯಿ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನ 7,800 ರೂಪಾಯಿ ಇದೆ. 22 ಕ್ಯಾರಟ್ ಹತ್ತು ಗ್ರಾಂಗೆ 71,500 ರೂಪಾಯಿ ಆಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಚಿನ್ನ 78,000 ರೂಪಾಯಿ ಆಗಿದೆ.
ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರದಲ್ಲಿ ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ, ಬೆಂಗಳೂರು, ಚೆನ್ನೈ, ಕೇರಳ, ಹೈದ್ರಾಬಾದ್, ಕೊಲ್ಕತ್ತಾ, ಮುಂಬೈ ನಗರದಲ್ಲಿ 7,150 ರೂಪಾಯಿ ಒಂದು ಗ್ರಾಂ ಚಿನ್ನದ ಬೆಲೆಯಾಗಿದೆ. ದಿಲ್ಲಿಯಲ್ಲಿ 7,165 ರೂಪಾಯಿ ಇದೆ.
ಇನ್ನು ಬೆಳ್ಳಿ ಬೆಲೆಯಲ್ಲೂ ಹೆಚ್ಚಳವಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ 92.50 ರೂಪಾಯಿ ಆಗಿದೆ. ಹಾಗೇ 100 ಗ್ರಾಂ ಬೆಳ್ಳಿಯ ಬೆಲೆ 92,500 ರೂಪಾಯಿ ಇದೆ. ಬೆಳ್ಳಿ ಕೊಂಚ ಯಥಾಸ್ಥಿತಿ ಕಾಪಾಡಿಕೊಂಡಿದೆ. ಡಿಸೆಂಬರ್ ತಿಂಗಳಲ್ಲಿ ಚಿನ್ನ ಬೆಳ್ಳಿ ದರ ಇಳಿಯಬಹುದು ಎಂದು ಊಹೆ ಮಾಡಿದ್ದವರಿಗೆ ಚಿನ್ನದ ದರ ಇಳಿಕೆ ಕಂಡು ಖುಷಿ ನೀಡಿತ್ತು. ಆದರೆ ಮತ್ತೆ ಮೂರು ದಿನಕ್ಕೆ ಏರಿಕೆಯಾಗಿದೆ. ಜನವರಿವರೆಗೂ ಏರುತ್ತಲೆ ಇರುತ್ತದೆ ಎಂದು ಅಂದಾಜಿಸಲಾಗಿದೆ.