HSRP ಪ್ಲೇಟ್ ಹಾಕ್ಸಿಲ್ಲ ಅಂದ್ರೆ ದಂಡ ಗ್ಯಾರಂಟಿ : ಸಾರಿಗೆ ಸಚಿವರಿಂದ ಮಹತ್ವದ ನಿರ್ಧಾರ..!

suddionenews
1 Min Read

ಬೆಂಗಳೂರು: ಈಗಾಗಲೇ HSRP ಪ್ಲೇಟ್ ಅಳವಡಿಸಲು ಸಾಕಷ್ಟು ಬಾರಿ ಸಮಯ ವಿಸ್ತರಣೆ ಮಾಡಲಾಗಿದೆ. ಐದು ಬಾರಿ ಗಡುವು ನೀಡಿದ ಸರ್ಕಾರ ಕೊನೆಯದಾಗಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಒಂದು ವೇಳೆ ಅಕ್ಟೋಬರ್ ವೇಳೆಗೆ HSRP ಪ್ಲೇಟ್ ಹಾಕಿಸದೆ ಹೋದಲ್ಲಿ ದಂಡ ಪ್ರಯೋಗ ಮಾಡಲು ಮುಂದಾಗಿದೆ.

ಶೀಘ್ರದಲ್ಲಿಯೇ 500 ರಿಂದ 1000 ರೂಪಾಯಿ ತನಕ ದಂಡ ವಿಧಿಸಲು ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ 2 ಕೋಟಿಗೂ ಅಧಿಕ ಹಳೆಯ ವಾಹನಗಳಿವೆ. ಆ ಪೈಕಿ ಕೇವಲ 53,00,000 ಲಕ್ಷ ವಾಹನಗಳಿಗೆ ಮಾತ್ರ HSRP ಪ್ಲೇಟ್ ಅಳವಡಿಕೆ ಮಾಡಲಾಗಿದೆ‌. ಆದರೆ ಎಲ್ಲಾ ಹಳೆಯ ವಾಹನಗಳಿಗೆ HSRP ಪ್ಲೇಟ್ ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಕಡ್ಡಾಯಗೊಳಿಸಿದರೂ ಕೂಡ ಗಡುವು ವಿಸ್ತರಣೆ ಮಾಡಿಕೊಂಡೆ ಬರಲಾಗಿದೆ. ಈ ಬಾರಿ ಹೈಕೋರ್ಟ್ ನಿಂದ ಕೂಡ ಆದೇಶ ಹೊರಬಿದ್ದಿದ್ದು, ಅಕ್ಟೋಬರ್ 20ರ ತನಕ ಅವಕಾಶವನ್ನು ವಿಸ್ತರಣೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಇತ್ತಿಚೆಗಷ್ಟೇ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದ್ರು, HSRP ಅಳವಡಿಕೆಯ ಗಡುವನ್ನು ಮತ್ತಷ್ಟು ವಿಸ್ತರಿಸುವ ಯಾವುದೇ ನಿರ್ದೇಶನವನ್ನು ನೀಡಿಲ್ಲ.ವತಕ್ಷಣವೇ ದಂಡ ವಿಧಿಸುವ ಬದಲು, ವಾಹನ ಸವಾರರಿಗೆ ನಿಯಮವನ್ನು ಅನುಸರಿಸಲು ಇಲಾಖೆ 15 ದಿನಗಳ ಕಾಲಾವಕಾಶವನ್ನು ನೀಡಿದೆ. ಬಳಿಕ ಅಕ್ಟೋಬರ್ ಆರಂಭದಲ್ಲಿ ಇದನ್ನು ಜಾರಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಸಾಕಷ್ಟು ಬಾರಿ ಗಡುವು ವಿಸ್ತರಣೆ ಮಾಡಿರುವ ಸರ್ಕಾರ ಅಕ್ಟೋಬರ್ 20ರ ಬಳಿಕ ಮತ್ತೆ ಕಾಲಾವಕಾಶ ನೀಡುವುದು ಅನುಮಾನವೇ ಸರಿ.

Share This Article
Leave a Comment

Leave a Reply

Your email address will not be published. Required fields are marked *