ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಈ ಯಾತ್ರೆಯಲ್ಲಿ ಸಿಕ್ಕಾಪಟ್ಟೆ ಹೈಲೇಟ್ ಆಗಿದ್ದು ಎಂದರೆ ಅದು ಅವರು ತೊಟ್ಟಿದ್ದ ಟೀ ಶರ್ಟ್. ಎಷ್ಟು ರಾಜ್ಯಕ್ಕೆ ತೆರಳಿದರು ಬಿಳಿ ಬಣ್ಣದ ಟೀ ಶರ್ಟ್ ಮಾತ್ರ ಧರಿಸಿದ್ದರು. ಮಳೆ, ಗಾಳಿ, ಚಳಿ ಏನೇ ಇದ್ದರು, ಅದಕ್ಕೂ ಜಗ್ಗಲಿಲ್ಲ. ಟೀ ಶರ್ಟ್ ಒಂದರಲ್ಲಿಯೇ ಯಾತ್ರೆ ಮುಂದುವರೆಸಿದ್ದಾರೆ.
ಈ ಬಗ್ಗೆ ಹಲವರು ಅನುಮಾನ ಕೂಡ ವ್ಯಕ್ತಪಡಿಸಿದ್ದಾರೆ. ಇದೆಲ್ಲ ಹೇಗೆ ಸಾಧ್ಯ..? ಎಂದು ಉತ್ತರ ಪ್ರದೇಶದ ಆರೋಗ್ಯ ಸಚಿವರು ಈ ಬಗ್ಗೆ ಒಮ್ಮೆ, ಅನುಮಾನವನ್ನು ವ್ಯಕ್ತಪಡಿಸಿದ್ದರು. ಗಡಗಡ ನಡುಗುವ ಚಳಿಯಲ್ಲಿ ಜನರು ಪ್ರಾಣವನ್ನೆ ಬಿಡುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಮಾತ್ರ ಇಷ್ಟೊಂದು ಆರೋಗ್ಯವಾಗಿದ್ದಾರೆ. ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಇದೆಯಾ ಎಂಬುದನ್ನು ಟೆಸ್ಟ್ ಮಾಡಬೇಕು ಎಂಬುದಾಗಿ ಹೇಳಿದ್ದರು. ಇನ್ನು ಹಲವರು ಥರ್ಮಕೋಲ್ ಬಳಸುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.
इस टी-शर्ट से बस इतना इज़हार कर रहा हूं,
थोड़ा दर्द आपसे उधार ले रहा हूं। pic.twitter.com/soVmiyvjqA— Rahul Gandhi (@RahulGandhi) January 9, 2023
ಇದೀಗ ಇದಕ್ಕೆಲ್ಲಾ ಸ್ವತಃ ರಾಹುಲ್ ಗಾಂಧಿಯವರೇ ಉತ್ತರ ನೀಡಿದ್ದಾರೆ. ಕನ್ಯಾಕುಮಾರಿ, ಕೇರಳದಲ್ಲಿ ಯಾತ್ರೆ ಶುರುವಾದಾಗ ಬಿಸಿಲಿನ ವಾತಾವರಣವಿತ್ತು. ಮಧ್ಯಪ್ರದೇಶಕ್ಕೆ ಬರುವಷ್ಟರಲ್ಲಿ ಸ್ವಲ್ಪ ಚಳಿ ಆರಂಭವಾಗಿತ್ತು. ಒಂದು ದಿನ ಮೂರು ಬಡ ಹೆಣ್ಣು ಮಕ್ಕಳಯ ಬಂದು ಮತನಾಡಿಸಿದರು. ಅವರ ಕೈ ನಡುಗುತ್ತಾ ಇತ್ತು. ಚಳಿಗೆ ಆ ರೀತಿ ಆಗಿತ್ತು. ಆಗ ನಾನು ಯೋಚನೆ ಮಾಡಿದೆ, ಆ ಬಡ ಹೆಣ್ಣು ಮಕ್ಕಳಿಗೆ ಚಳಿಯಾದಂತೆ ರಾಹುಲ್ ಗಾಂಧಿಗೂ ಚಳಿಯಾಗುತ್ತಿರುತ್ತೆ ಎಂಬ ಸಂದೇಶ ಕೊಡಲು ಹೊರಟೆ ಎಂದಿದ್ದಾರೆ.