ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ.ಆ.13: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಐತಿಹಾಸಿಕ ಕಲ್ಲಿನಕೋಟೆ ಸೇರಿದಂತೆ ಜಿಲ್ಲೆಯಾದ್ಯಂತ ನಗರ, ಪಟ್ಟಣ, ಹಳ್ಳಿ, ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ಮನೆ, ಅಂಗಡಿ ಮಳಿಗೆಗಳ ಮೇಲೆ ಸಾರ್ವಜನಿಕರು ಭಾನುವಾರ ಧ್ವಜಾರೋಹಣ ಮಾಡಿ ಸಂಭ್ರಮಿಸಿದರು.
ಚಿತ್ರದುರ್ಗ, ಆ.13 :
ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ತಮ್ಮ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ಸಲ್ಲಿಸಿದರು. pic.twitter.com/wOpnlYbCWO— suddione-kannada News (@suddione) August 13, 2023
ಸರ್ಕಾರದ ನಿರ್ದೇಶನದಂತೆ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಸೆಲ್ಫೀ ಅಪ್‍ಲೋಡ್ ಮಾಡುವುದು.
ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ : ಚಿತ್ರದುರ್ಗದಲ್ಲಿ ರಾಷ್ಟ್ರಧ್ವಜ ಎಲ್ಲಿ ಸಿಗುತ್ತವೆ ? ದರ ಎಷ್ಟು ? ಜಿಲ್ಲಾಧಿಕಾರಿ ದಿವ್ಯಪ್ರಭು ಮಾಹಿತಿ…! ಈ ಸುದ್ದಿ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸೆಲ್ಫೀಗಳನ್ನು ಹ್ಯಾಶ್ಟ್ಯಾಗ್‍ಗಳ ಜೊತೆ ಪೋಸ್ಟ್ ಮಾಡುವುದು. ಆಗಸ್ಟ್ 13ರಂದು ಸೆಲ್ಫೀ ವಿತ್ ತಿರಂಗಾ, 14 ರಂದು ಹರ್ ದಿಲ್ ತಿರಂಗಾ, 15ರಂದು ಹರ್ ಘರ್ ತಿರಂಗಾ ಛಾಯಾಚಿತ್ರವನ್ನು ಹರ್ ಘರ್ ತಿರಂಗಾ ವೆಬ್‍ಸೈಟ್
harghartiranga.com
ನಲ್ಲಿ ಅಪ್‍ಲೋಡ್ ಮಾಡಬೇಕು. ಅಪ್‍ಲೋಡ್ ಮಾಡಿದ ತಕ್ಷಣ ಆನ್‍ಲೈನ್‍ನಲ್ಲಿ ಪ್ರಮಾಣ ಲಭ್ಯವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.