ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ತಾನೂ ನೀಡಿದ ಗ್ಯಾರಂಟಿಗಳನ್ನು ಚಾಲ್ತಿಗೆ ತರುತ್ತಿದೆ. ಅದರಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ 2 ಸಾವಿರ ಹಣ ನೀಡುವುದರ ಕುರಿತಾಗಿ ಮಹತ್ವದ ಮಾಹಿತಿಯೊಂದು ಸಿಕ್ಕಿದೆ. ಮನೆಯ ಯಜಮಾನಿಗೆ ಅರ್ಜಿಯೊಂದು ಬಿಡುಗಡೆಯಾಗಿದೆ. ಆ ಅರ್ಜಿಯಲ್ಲಿ ಏನೆಲ್ಲಾ ಇದೆ..? ಏನೆಲ್ಲಾ ತುಂಬಬೇಕು ಎಂಬ ಮಾಹಿತಿ ಇಲ್ಲಿದೆ.
ಜೂನ್ 15ರಿಂದ ಜುಲೈ15ರ ತನಕ ಅರ್ಜಿ ತುಂಬಲು ಕಾಲಾವಕಾಶ ನೀಡಲಾಗಿದೆ. ಈಗ ಇ – ಅರ್ಜಿ ನಮೂನೆಯನ್ನು ಬಿಡಿಗಡೆ ಮಾಡಿದೆ. ಸದ್ಯ ಈ ಅರ್ಜಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು . ಬಳಿಕ ಆಗಸ್ಟ್ 15 ರಂದು ಮನೆಯ ಯಜಮಾನಿಗೆ ಮೊದಲ ಕಂತಿನ ಹಣ ಸಂದಾಯವಾಗುತ್ತದೆ.
ಅರ್ಜಿಯಲ್ಲಿ ಮೊದಲಿಗೆ ಮನೆಯ ಯಜಮಾನಿಯ ಹೆಸರು ಮತ್ತು ವಿಳಾಸ ಭರ್ತಿಗೆ ನೀಡಲಾಗಿದೆ. ಆಧಾರ್ ಕಾರ್ಡ್, ವೋಟರ್ ಐಡಿ, ಪಡಿತರ ಸಂಖ್ಯೆ, ಉದ್ಯೋಗ, ಪತಿಯ ಹೆಸರು, ಪತಿಯ ಆಧಾರ್ ಕಾರ್ಡ್ ಕೂಡ ನಮೂದಿಸುವಂತೆ ಕೇಳಲಾಗಿದೆ. ಮೊಬೈಲ್ ನಂಬರ್ ನೀಡುವುದು ಕಡ್ಡಾಯ, ಬ್ಯಾಂಕ್ ಖಾತೆ ಸಂಖ್ಯೆ ಜೊತೆಗೆ ಪಾಸ್ ಬುಕ್ ಕೂಡ ನೀಡಬೇಕಾಗಿದೆ.