Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಾಳಾದ ಮತ್ತು ಹರಿದ ನೋಟುಗಳನ್ನು ಉಚಿತವಾಗಿ ವಿನಿಮಯ ಮಾಡಿಕೊಳ್ಳುವುದು ಹೇಗೆ ? RBI ನಿಯಮಗಳು ಏನು ?

Facebook
Twitter
Telegram
WhatsApp

 

ಅನೇಕ ಸಂದರ್ಭಗಳಲ್ಲಿ ನೀವು ಹರಿದ ನೋಟುಗಳನ್ನು ಪಡೆಯುತ್ತೀರಿ. ಹಾಳಾದ ನೋಟುಗಳನ್ನು ಬೇರೆಯವರಿಗೆ ನೀಡಿದರೆ ಸ್ವೀಕರಿಸುವುದಿಲ್ಲ. ಅಂತಹ ಸಂದರ್ಭದಲ್ಲಿ ಆ ನೋಟುಗಳ ಚಲಾವಣೆ ಹೇಗೆ ? ಅವುಗಳನ್ನು ಉಚಿತವಾಗಿ ಬದಲಾಯಿಸುವುದು ಹೇಗೆ ? ಈಗ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯೋಣ.

 

ಹಳೆ ನೋಟುಗಳು, ಹರಿದ, ಹಾಳಾದ ನೋಟುಗಳು, ಹಾಳಾದ ನಾಣ್ಯಗಳು ನಿಮ್ಮ ಕೈಗೆ ಸಿಕ್ಕರೆ, ಅವುಗಳನ್ನು ಬದಲಾಯಿಸಿಕೊಳ್ಳಲು ತೊಂದರೆಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಎಟಿಎಂಗಳಿಂದಲೂ ಇಂತಹ ಹಾಳಾದ ನೋಟುಗಳು ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಹತ್ತು, ಇಪ್ಪತ್ತು ಮತ್ತು ಐವತ್ತು ರೂಪಾಯಿ ಮುಖಬೆಲೆಯ ಹೊಸ ಕರೆನ್ಸಿ ನೋಟುಗಳು ಸಿಗುವು ಬಹಳ ಅಪರೂಪ. ಹಳೆಯ ನೋಟುಗಳನ್ನು ಬದಲಾಯಿಸಬೇಕು ಹೇಗೆ ಎಂಬುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಕೆಲವು ಅಂಗಡಿಗಳು ಅಂತಹ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತವೆ. ಖಾಸಗಿ ವ್ಯಕ್ತಿಗಳು ನಡೆಸುತ್ತಿರುವ ಈ ಅಂಗಡಿಗಳು ಹಳೆಯ, ಹರಿದ ನೋಟುಗಳು ಮತ್ತು ಹಾಳಾದ ನಾಣ್ಯಗಳನ್ನು ತೆಗೆದುಕೊಂಡು ಹೊಸದನ್ನು ನೀಡುತ್ತವೆ. ಇದಕ್ಕಾಗಿ ಒಂದಿಷ್ಟು ಕಮಿಷನ್ ಪಡೆದು ಅದಕ್ಕೆ ಬದಲಾಗಿ ಹಣ ನೀಡಲಾಗುವುದು. ನೋಟುಗಳ ಸ್ಥಿತಿಯನ್ನು ಅವಲಂಬಿಸಿ, ಪ್ರದೇಶದಿಂದ ಪ್ರದೇಶಕ್ಕೆ ಅನುಗುಣವಾಗಿ ಅವರು ಕಮಿಷನ್ ಪಡೆಯುತ್ತಾರೆ. ಅಂತಹ ಹರಿದ ಮತ್ತು ಹಾನಿಗೊಳಗಾದ ನೋಟುಗಳನ್ನು ಸುಲಭವಾಗಿ ಬದಲಾಯಿಸಲು ಹಲವು ಮಾರ್ಗಗಳಿವೆ.  ಬ್ಯಾಂಕುಗಳು ಅಥವಾ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಕಚೇರಿಗಳು.  ಚಲಾವಣೆ (ನೆಗೋಶಬಲ್) ಅಲ್ಲದ ನೋಟುಗಳು ಯಾವುವು? ಹರಿದ ನೋಟುಗಳು ಯಾವುವು ? ಇವುಗಳನ್ನು ಹೇಗೆ ವರ್ಗೀಕರಿಸಲಾಗಿದೆ? ಯಾವ ನೋಟಿಗೆ ಯಾವ ವಿನಿಮಯ ಮೌಲ್ಯವನ್ನು ಪಾವತಿಸಲಾಗುತ್ತದೆ ? ಈಗ ನಾವು ಸಂಪೂರ್ಣ ವಿವರಗಳನ್ನು ತಿಳಿಯೋಣ.

ಯಾವ ರೀತಿಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ?

ಕಳೆಗುಂದಿದ ನೋಟುಗಳು ಒಂದೇ ಅಂಕಿಯ ಕರೆನ್ಸಿ ನೋಟುಗಳಾಗಿದ್ದರೆ, ಅಂದರೆ 1 ರೂಪಾಯಿ, 2 ರೂಪಾಯಿ, 5 ರೂಪಾಯಿ ನೋಟುಗಳಾಗಿದ್ದರೆ, ಅವುಗಳು ಎರಡಕ್ಕಿಂತ ಹೆಚ್ಚು ತುಂಡುಗಳಾಗಿರಬಾರದು. ಆ ಎರಡೂ ತುಣುಕುಗಳು ಒಂದೇ ನೋಟಿನದ್ದಾಗಿರಬೇಕು. ಅದರ ಮೇಲೆ ಇರುವ ಅಂಕೆ ಸಂಖ್ಯೆಗಳು ಹಾನಿಗೊಳಗಾಗಬಾರದು ಅಥವಾ ಕಾಣೆಯಾಗಬಾರದು.

ಎರಡಂಕಿಯ ಕರೆನ್ಸಿ ನೋಟು ರೂ.10, ರೂ. 20, ರೂ.50, ರೂ. 100 ಇತ್ಯಾದಿ ನೋಟುಗಳನ್ನು ವಿನಿಮಯಕ್ಕಾಗಿ ಎರಡಕ್ಕಿಂತ ಹೆಚ್ಚು ಭಾಗಗಳಾಗಿ ಹರಿದಿರಬಾರದು. ‌ ಎರಡೂ ತುಣುಕುಗಳು ಒಂದೇ ನೋಟಿನದ್ದಾಗಿರಬೇಕು. ಇದಲ್ಲದೆ, ಅದರ ಸಂಖ್ಯೆಯು ಹರಿದ ಎರಡೂ ಭಾಗಗಳಲ್ಲಿ ಸ್ಪಷ್ಟವಾಗಿ ಗೋಚರಿಸಬೇಕು.

ಹರಿದ ನೋಟುಗಳನ್ನು ಬದಲಾಯಿಸುವುದು ಹೇಗೆ?

ದಿನಕ್ಕೆ 20 ನೋಟುಗಳಂತೆ ವಿವಿಧ ನೋಟುಗಳನ್ನು ಬ್ಯಾಂಕ್‌ನಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಬ್ಯಾಂಕ್‌ಗಳು ಯಾವುದೇ ಶುಲ್ಕವನ್ನು ವಿಧಿಸದೆ ಕೌಂಟರ್‌ನಲ್ಲಿ ವಿನಿಮಯ ಮಾಡಿಕೊಳ್ಳುತ್ತವೆ. ಒಬ್ಬ ವ್ಯಕ್ತಿಯು 20 ನೋಟುಗಳನ್ನು ಅಥವಾ
5,000 ರೂ.ಗಿಂತ ಹೆಚ್ಚಿನ ಮೌಲ್ಯದ ನೋಟುಗಳನ್ನು ಬದಲಾಯಿಸಲು ವಿನಂತಿಸಿದರೆ, ಬ್ಯಾಂಕ್ ಟೋಕನ್  ನೀಡಬಹುದು ಮತ್ತು ಪಾವತಿಯನ್ನು ನಂತರ ಮಾಡಲು ವ್ಯವಸ್ಥೆ ಮಾಡಬಹುದು.

ಜುಲೈ 2015 ರಲ್ಲಿ ಹೊರಡಿಸಲಾದ ಸುತ್ತೋಲೆ ಪ್ರಕಾರ, ಅಂತಹ ಸಂದರ್ಭಗಳಲ್ಲಿ ಬ್ಯಾಂಕ್‌ಗಳು ಸೇವಾ ಶುಲ್ಕವನ್ನು ಸಹ ವಿಧಿಸಬಹುದು. ಈ ನೋಟುಗಳ ಮೌಲ್ಯ ರೂ.50,000ಕ್ಕಿಂತ ಹೆಚ್ಚಿದ್ದರೆ ಬ್ಯಾಂಕ್ ಗಳು ನಿಯಮಾನುಸಾರ ಶುಲ್ಕ ವಿಧಿಸುತ್ತವೆ.

ಹರಿದ ನೋಟುಗಳನ್ನು ಎಲ್ಲಿ ತೆಗೆದುಕೊಳ್ಳಲಾಗುತ್ತದೆ ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್-1934 ರ ಸೆಕ್ಷನ್ 28 ಮತ್ತು ಸೆಕ್ಷನ್ 58 (2) ಅಡಿಯಲ್ಲಿ, ಯಾವುದೇ ವ್ಯಕ್ತಿಗೆ ಸಂಪೂರ್ಣವಾಗಿ ವಿರೂಪಗೊಳಿಸಿದ ಅಥವಾ ಕದ್ದ ನೋಟುಗಳನ್ನು ಮರುಪಡೆಯಲು ಹಕ್ಕಿಲ್ಲ. ಆದರೆ, ಕೆಲವು ವಿಶೇಷ ಪ್ರಕರಣಗಳಲ್ಲಿ, ಈ ನಿಟ್ಟಿನಲ್ಲಿ ಜನರಿಗೆ ಆಗುವ ಅನಾನುಕೂಲತೆಯನ್ನು ಹೋಗಲಾಡಿಸಲು, ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಹಾನಿಗೊಳಗಾದ ನೋಟುಗಳನ್ನು ಬದಲಾಯಿಸಿ ಕೊಡಲು ಆರ್‌ಬಿಐ ಕ್ರಮಕೈಗೊಂಡಿದೆ. ಬ್ಯಾಂಕ್‌ಗಳು ಮತ್ತು ಕರೆನ್ಸಿ ಚೆಸ್ಟ್‌ಗಳಲ್ಲಿ (ಆರ್‌ಬಿಐ ಮುದ್ರಿತ ನೋಟುಗಳನ್ನು ಬ್ಯಾಂಕ್‌ಗಳು ಮತ್ತು ಎಟಿಎಂಗಳಿಗೆ ಸರಬರಾಜು ಮಾಡುವ ಸ್ಥಳ) ಹಾನಿಗೊಳಗಾದ ನೋಟುಗಳ ವಿನಿಮಯವನ್ನು ಮಾಡಿಕೊಡುತ್ತವೆ.
ದೇಶದ ಎಲ್ಲಾ ಭಾಗಗಳಲ್ಲಿನ ಎಲ್ಲಾ ಬ್ಯಾಂಕ್ ಶಾಖೆಗಳು ಸಾಮಾನ್ಯ ಜನರಿಗೆ ಈ ಸೇವೆಗಳನ್ನು ಒದಗಿಸಬೇಕು. ಯಾವುದೇ ಬ್ಯಾಂಕ್ ನೋಟುಗಳನ್ನು ಸ್ವೀಕರಿಸಲು ನಿರಾಕರಿಸುವಂತಿಲ್ಲ. ನೋಟುಗಳ ವಿನಿಮಯಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಅಲ್ಲದೆ ಯಾವುದೇ ಚಲನ್ ನಮೂನೆಗಳನ್ನು ಭರ್ತಿ ಮಾಡುವ ಅಗತ್ಯವಿಲ್ಲ.

ಯಾವ ರೀತಿಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ?

ಕೊಳಕು ನೋಟುಗಳನ್ನು ಇಂಗ್ಲಿಷಿನಲ್ಲಿ soil note ಗಳು ಎಂದು ಕರೆಯಲಾಗುತ್ತದೆ.   ಸವೆದಿರುವ, ಮಣ್ಣಾಗಿರುವ ಮತ್ತು ಅಲ್ಲೊಂದು ಇಲ್ಲೊಂದು ಹರಿದ ನೋಟುಗಳನ್ನು (Soiled ನೋಟುಗಳು) ಪರಿಗಣಿಸಲಾಗುತ್ತದೆ. ರೂ. 10ಕ್ಕಿಂತ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಎರಡು ತುಂಡುಗಳಾಗಿ ಹರಿದರೂ ಅವುಗಳನ್ನು soiled ನೋಟುಗಳೆಂದು ಪರಿಗಣಿಸಲಾಗುತ್ತದೆ. ಹರಿದ ನೋಟುಗಳು ಎರಡು ಅಥವಾ ಹೆಚ್ಚಿನ ತುಂಡುಗಳಾಗಿ/ಅಥವಾ ಪ್ರಮುಖ ಭಾಗಗಳನ್ನು ಕಳೆದುಕೊಂಡಿರುವವುಗಳಾಗಿವೆ. ನೋಟುಗಳನ್ನು ವಿತರಣಾ ಪ್ರಾಧಿಕಾರದ ಹೆಸರು (ಭಾರತೀಯ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್), ಸಹಿ, ಅಶೋಕ ಸ್ತಂಭ, ಗಾಂಧಿ ಆಕೃತಿ, ನೀರಿನ ಗುರುತು ಮುಂತಾದ ಪ್ರಮುಖ ಭಾಗಗಳು ಕಾಣೆಯಾದ ನೋಟುಗಳನ್ನು ಹರಿದ ನೋಟುಗಳೆಂದು ಆರ್‌ಬಿಐ ಪರಿಗಣಿಸುತ್ತದೆ. ಇವುಗಳನ್ನು ಸಹ ಬದಲಾಯಿಸಬಹುದು. ಸುಟ್ಟವುಗಳು, ಹರಿದುಹೋಗುವವುಗಳು, ಸಾಮಾನ್ಯ ಸ್ಥಿತಿಯಲ್ಲಿ ಬಳಸಲಾಗದ ಸ್ಥಿತಿಯಲ್ಲಿರುವವುಗಳು ಈ ವರ್ಗಕ್ಕೆ ಬರುತ್ತವೆ. ಇವುಗಳನ್ನು ಸಹ ಬದಲಾಯಿಸಬಹುದು.

ಯಾವ ನೋಟಿಗೆ ಎಷ್ಟು ನೀಡಲಾಗುವುದು ?

ನೋಟು ದೊಡ್ಡ ತುಂಡು ಆಗಿದ್ದರೆ, ಆ ನೋಟಿನ ಮುಖಬೆಲೆಯ ಶೇಕಡಾ 50 ಕ್ಕಿಂತ ಹೆಚ್ಚು ಇದ್ದರೆ ಅದಕ್ಕೆ ಸಂಪೂರ್ಣ ಮೌಲ್ಯವನ್ನು ವಿನಿಮಯವಾಗಿ ನೀಡಲಾಗುತ್ತದೆ. ನೋಟಿನ ಒಟ್ಟು ವಿಸ್ತೀರ್ಣದಲ್ಲಿ ಅದರ ವಿಸ್ತೀರ್ಣವು ಶೇಕಡ 50 ಕ್ಕಿಂತ ಕಡಿಮೆಯಿದ್ದರೂ ಸಹ ವಿನಿಮಯಕ್ಕಾಗಿ ಹರಿದ ನೋಟು ಸ್ವೀಕಾರಾರ್ಹವಲ್ಲ. ಮೇಲಿನ ಎಲ್ಲಾ ನಿಬಂಧನೆಗಳು ಒಂದು ರೂ.ನಿಂದ ರೂ.20 ರವರೆಗಿನ ನೋಟುಗಳಿಗೆ ಸಂಬಂಧಿಸಿವೆ. ಅದರ ನಂತರದ ದೊಡ್ಡ ಮುಖಬೆಲೆಯ ಹರಿದ ನೋಟಿನ ದೊಡ್ಡ ತುಂಡು ನೋಟಿನ ಮುಖಬೆಲೆಯ ಒಟ್ಟು ಪ್ರದೇಶದ ಶೇಕಡಾ 80 ಕ್ಕಿಂತ ಹೆಚ್ಚಿದ್ದರೆ, ಅದಕ್ಕೆ ಸಂಪೂರ್ಣ ಮೌಲ್ಯವನ್ನು ವಿನಿಮಯವಾಗಿ ನೀಡಲಾಗುತ್ತದೆ. 80ಕ್ಕಿಂತ ಕಡಿಮೆ ಇದ್ದರೆ ಅರ್ಧದಷ್ಟು ನೀಡಲಾಗುತ್ತದೆ. 40 ಕ್ಕಿಂತ ಕಡಿಮೆ ಇದ್ದರೆ ಯಾವುದೇ ವಿನಿಮಯವನ್ನು ಅನುಮತಿಸಲಾಗುವುದಿಲ್ಲ.

ಬ್ಯಾಂಕುಗಳು ವಿನಿಮಯ ಮಾಡಿಕೊಳ್ಳದಿದ್ದರೆ ಏನು ಮಾಡಬೇಕು ?

ನೋಟುಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ನಿಂದ ಯಾವುದೇ ಸಮಸ್ಯೆ ಉಂಟಾದರೆ ಗ್ರಾಹಕರು ಬ್ಯಾಂಕ್ ಗೆ ದೂರು ನೀಡಬಹುದು. ಒಂದು ವೇಳೆ ಬ್ಯಾಂಕ್  ನೀಡಿದ ದೂರಿಗೆ 30 ದಿನಗಳೊಳಗೆ ತೃಪ್ತಿದಾಯಕ ಉತ್ತರವನ್ನು ನೀಡದಿದ್ದರೆ,
ಗ್ರಾಹಕರು ರಿಸರ್ವ್ ಬ್ಯಾಂಕ್ – ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಸ್ಕೀಮ್, 2021 ರ ಅಡಿಯಲ್ಲಿ ಆರ್‌ಬಿಐ ಒಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು.

ದೂರುಗಳನ್ನು ಆನ್‌ಲೈನ್‌ನಲ್ಲಿ https://cms.rbi.org.in ನಲ್ಲಿ ಸಲ್ಲಿಸಬಹುದು ಅಥವಾ RBI ದೂರುಗಳ ಇಮೇಲ್‌ಗೆ ಕಳುಹಿಸಬಹುದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅನ್ನ ಮಾಡುವಾಗ ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಗೊತ್ತಾ ?

ಸುದ್ದಿಒನ್ : ನಾವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವ ಪ್ರಮುಖ ಆಹಾರವೆಂದರೆ ಅಕ್ಕಿ. ದೇಶದ ಹೆಚ್ಚಿನ ಭಾಗಗಳಲ್ಲಿ, ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬ್ರೌನ್ ರೈಸ್ ಮತ್ತು

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ.

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ. ಈ ರಾಶಿಯವರು ತುಂಬಾ ದಿವಸದಿಂದ ಪ್ರೀತಿಸುತ್ತಿದ್ದಾರೆ ಆದರೆ ಇವರ ಜೊತೆ ಮದುವೆ ಆಗುತ್ತೋ ಇಲ್ವೋ ಎಂಬ ಅನುಮಾನ, ಭಾನುವಾರ- ರಾಶಿ ಭವಿಷ್ಯ

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

error: Content is protected !!