ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಬಳಕೆ ಅನಿವಾರ್ಯವಾಗಿದೆ. ವಾಟ್ಸಾಪ್ ಇಲ್ಲದ ಸ್ಮಾರ್ಟ್ ಫೋನ್ ಇಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ವಾಟ್ಸಾಪ್ ತುಂಬಾ ಜನಪ್ರಿಯತೆ ಗಳಿಸಿದೆ. ಇದೀಗ ವಾಟ್ಸಾಪ್ ಜನಪ್ರಿಯತೆಯನ್ನು ಅನೇಕ ಕಂಪನಿಗಳು ತಮ್ಮ ಸೇವೆಗಳನ್ನು ವಿಸ್ತರಿಸಲು ಬಳಸುತ್ತಿವೆ.
ಅಂತಹ ಒಂದು ಸೇವೆಯು ಗ್ಯಾಸ್ ಬುಕಿಂಗ್ ಆಗಿದೆ.
ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡುವಂತಹ ಪ್ರಕ್ರಿಯೆ ಇರುತ್ತದೆ. ಆದರೆ ವಾಟ್ಸಾಪ್ ಮೂಲಕ ಸರಳವಾಗಿ ಗ್ಯಾಸ್ ಬುಕ್ ಮಾಡಲು ಸಾಧ್ಯವಿದೆ. ಹಾಗಾದರೆ ಈಗ ವಾಟ್ಸಾಪ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ಹೇಗೆ ಎಂಬುವುದನ್ನು ತಿಳಿಯೋಣ.
HP ಗ್ಯಾಸ್ ಬುಕ್ ಮಾಡುವುದು ಹೇಗೆ ?
ಇದಕ್ಕಾಗಿ ಮೊದಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ 9222201222 ಸಂಖ್ಯೆಯನ್ನು ಸೇವ್ ಮಾಡಬೇಕು.
ಅದರ ನಂತರ, WhatsApp chat ತೆರೆದು ಮತ್ತು ಮೇಲೆ ತಿಳಿಸಲಾದ ಸಂಖ್ಯೆಗೆ ‘HP GAS BOOK’ ಎಂಬ ಸಂದೇಶವನ್ನು ಕಳುಹಿಸಿ.
ನಂತರ ಕಂಪನಿ ವತಿಯಿಂದ ನಿಮಗೆ ಬರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಗ್ಯಾಸ್ ಬುಕ್ ಮಾಡಬಹುದು. ಗ್ಯಾಸ್ ಬುಕ್ ಮಾಡಿದ ನಂತರ ನೀವು ದೃಢೀಕರಣ ಸಂದೇಶವನ್ನು (Confirmation message) ಪಡೆಯುತ್ತೀರಿ.
ಭಾರತ್ ಗ್ಯಾಸ್ ಸಿಲಿಂಡರ್ ಅನ್ನು ಹೀಗೆ ಬುಕ್ ಮಾಡಿ..
ನಿಮ್ಮ ಮೊಬೈಲ್ ನಲ್ಲಿ ‘ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್’ ನ 1800224344 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು.
ಅದರ ನಂತರ, ಚಾಟ್ ಬಾಕ್ಸ್‌ನಲ್ಲಿ ‘BOOK’ ಅಥವಾ ‘1’ ಸಂಖ್ಯೆಯನ್ನು ನಮೂದಿಸಿ send ಮಾಡಿ. ತಕ್ಷಣವೇ ಪೇಮೆಂಟ್ ಲಿಂಕ್ ಗೋಚರಿಸುತ್ತದೆ.
ಇಂಡೇನ್ ಗ್ಯಾಸ್ ಅನ್ನು ಹೀಗೆ ಬುಕ್ ಮಾಡಿ..
ಇದಕ್ಕಾಗಿ ಮೊದಲು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ 7588888824 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು.
ಅದರ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮೇಲೆ ತಿಳಿಸಲಾದ ಸಂಖ್ಯೆಗೆ ‘ರೀಫಿಲ್
<16-ಅಂಕಿಯ ಐಡಿ>’ ಸಂದೇಶವನ್ನು ಕಳುಹಿಸಿ.
ಡಿಜಿಟಲ್ ಪಾವತಿ ಲಿಂಕ್ ಅನ್ನು ತಕ್ಷಣವೇ ನಿಮ್ಮ WhatsApp ಗೆ ಕಳುಹಿಸಲಾಗುತ್ತದೆ.