5 ವರ್ಷಗಳಲ್ಲಿ ಪ್ರಧಾನಿ ಮೋದಿ ಪ್ರವಾಸಕ್ಕೆ ಖರ್ಚು ಮಾಡಿದ ಹಣವೆಷ್ಟು..?

5 ವರ್ಷಗಳಲ್ಲಿ ಪ್ರಧಾನಿ ಮೋದಿ ಪ್ರವಾಸಕ್ಕೆ ಖರ್ಚು ಮಾಡಿದ ಹಣವೆಷ್ಟು..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಗಾಗ ವಿದೇಶಿ ಪ್ರವಾಸಗಳನ್ನು ಕೈಗೊಳ್ಳುತ್ತಲೇ ಇರುತ್ತಾರೆ. ಭಾರತದ ಜೊತೆಗೆ ಇತರ ರಾಷ್ಟ್ರಗಳ ಬಂಧವನ್ನು ಬಲಪಡಿಸಲು ವಿದೇಶಿ ಪ್ರವಾಸಗಳನ್ನು ಮಾಡುತ್ತಾ ಇರುತ್ತಾರೆ. ಇದೀಗ ಈ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ವಿದೇಶಿ ಪ್ರವಾಸಕ್ಕೆಂದು ಮಾಡಿದ ಖರ್ಚಿನ ಬಗ್ಗೆ ಸಿಪಿಐ ಸಂಸದ ಎಳಮುರಮ್ ಕರಿಂ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿ ವಿದೇಶಿ ಪ್ರವಾಸದ ವಿವರವನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರುಳೀಧರನ್ ಅವರು ನೀಡಿದ್ದಾರೆ.

1. ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಇತ್ತೀಚಿನ ಇಂಡೋನೇಷ್ಯಾ ಭೇಟಿಯ ವೆಚ್ಚ 32,09,760 ರೂಪಾಯಿಗಳು.
2. ಸೆಪ್ಟೆಂಬರ್ 26 ಮತ್ತು 28 ರ ನಡುವೆ ಪ್ರಧಾನಿಯವರ ಜಪಾನ್ ಭೇಟಿಗೆ 23,86,536 ರೂಪಾಯಿ ವೆಚ್ಚ
3. ಈ ವರ್ಷದ ಆರಂಭದಲ್ಲಿ ಪ್ರಧಾನಿ ಮೋದಿಯವರ ಯುರೋಪ್ ಭೇಟಿಯ ವೆಚ್ಚ 2,15,61,304 ರೂಪಾಯಿಗಳು.
4. 2019 ರ ಸೆಪ್ಟೆಂಬರ್ 21 ಮತ್ತು 28 ರ ನಡುವೆ ಪ್ರಧಾನಿಯವರ ಯುಎಸ್ ಭೇಟಿಗೆ 23,27,09,000 ರೂಪಾಯಿ ವೆಚ್ಚವಾಗಿದೆ ಎಂದಿದ್ದಾರೆ.

ಈ ಭೇಟಿಗಳ ಸಮಯದಲ್ಲಿ ಭಾರತವು ಪಾಲುದಾರ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸಿದೆ. ಭಾರತದ ದೃಷ್ಟಿಕೋನವನ್ನು ಜಗತ್ತಿನ ಮುಂದಿಡಲು ಮತ್ತು ಜಾಗತಿಕ ವಿಷಯಗಳಾದ ಸುಧಾರಿತ ಬಹುಪಕ್ಷೀಯತೆ, ಹವಾಮಾನ ಬದಲಾವಣೆ, ದೇಶೀಯ ಅಪರಾಧ, ಭಯೋತ್ಪಾದನೆ, ಸೈಬರ್-ಸುರಕ್ಷತೆ ಇತ್ಯಾದಿಗಳ ಬಗ್ಗೆ ಜಾಗತಿಕ ಕಾರ್ಯಸೂಚಿಯನ್ನು ರೂಪಿಸಲು ಅನುವು ಮಾಡಿಕೊಟ್ಟಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *