ವಿಡಿಯೋಗಳಲ್ಲಿ ಯಾವುದಾದರೂ ಒಂದು 1 ಮಿಲಿಯನ್ ವೀಕ್ಷಣೆಗಳನ್ನು ಪಡೆದರೆ, ನೀವು ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು. 1 ಮಿಲಿಯನ್ ವೀಕ್ಷಣೆಗಳಿಗೆ ಯೂಟ್ಯೂಬ್ ಲಕ್ಷಾಂತರ ರೂಪಾಯಿಗಳನ್ನು ನೀಡುತ್ತದೆ! ಆದರೆ, ಈ ಆದಾಯವು ನಿಮ್ಮ ವಿಡಿಯೋದ ವಿಭಾಗ (Category), ಪ್ರೇಕ್ಷಕರು ಎಲ್ಲಿಂದ ನೋಡುತ್ತಿದ್ದಾರೆ ಮತ್ತು ವಿಡಿಯೋದ ಉದ್ದದ ಮೇಲೆ ನಿರ್ಧರಿತವಾಗುತ್ತದೆ.
ಆದಾಯ ನಿರ್ಧರಿಸುವ ಪ್ರಮುಖ ಅಂಶಗಳು:
ವಿಡಿಯೋ ವರ್ಗ: ಫೈನಾನ್ಸ್, ಟೆಕ್ನಾಲಜಿ ಅಥವಾ ಬಿಸಿನೆಸ್ ಕುರಿತ ವಿಡಿಯೋಗಳಿಗೆ ಎಂಟರ್ಟೈನ್ಮೆಂಟ್ ವಿಡಿಯೋಗಳಿಗಿಂತ ಹೆಚ್ಚು ಹಣ ಸಿಗುತ್ತದೆ (ಹೆಚ್ಚಿನ CPM).
ಪ್ರೇಕ್ಷಕರ ಸ್ಥಳ: ನಿಮ್ಮ ವಿಡಿಯೋವನ್ನು ಅಮೆರಿಕ ಅಥವಾ ಯುರೋಪ್ ದೇಶಗಳಲ್ಲಿ ನೋಡಿದರೆ ಆದಾಯ ಭಾರತಕ್ಕಿಂತ ಹೆಚ್ಚಾಗಿರುತ್ತದೆ.
ವಿಡಿಯೋ ಫಾರ್ಮ್ಯಾಟ್: ಲಾಂಗ್ ವಿಡಿಯೋಗಳಿಗೆ ಶಾರ್ಟ್ಸ್ ವಿಡಿಯೋಗಳಿಗಿಂತ ಹೆಚ್ಚಿನ ಜಾಹೀರಾತು ಆದಾಯವಿರುತ್ತದೆ.
ಈ ವರ್ಷದ ಅಂದಾಜು ಆದಾಯದ ಲೆಕ್ಕಾಚಾರ
ಪ್ರತಿ 1,000 ವೀಕ್ಷಣೆಗಳಿಗೆ: 50 ರಿಂದ 200 ರೂಪಾಯಿಗಳು.
ಪ್ರತಿ 10,000 ವೀಕ್ಷಣೆಗಳಿಗೆ: 500 ರಿಂದ 2,000 ರೂಪಾಯಿಗಳು.
ಪ್ರತಿ 1,00,000 ವೀಕ್ಷಣೆಗಳಿಗೆ: 5,000 ರಿಂದ 20,000 ರೂಪಾಯಿಗಳು.
ಪ್ರತಿ 1 ಮಿಲಿಯನ್ (10 ಲಕ್ಷ) ವೀಕ್ಷಣೆಗಳಿಗೆ: ನೀವು ಅನುಭವೀ ಕ್ರಿಯೇಟರ್ ಆಗಿದ್ದರೆ ಮತ್ತು ನಿಮ್ಮ ಕಂಟೆಂಟ್ ಉತ್ತಮವಾಗಿದ್ದರೆ, ಸುಮಾರು 2 ಲಕ್ಷ ರೂಪಾಯಿಗಳವರೆಗೆ ಗಳಿಸಬಹುದು.






