ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಉಳಿದ ಆನೆಗಳ ಬಗ್ಗೆ ನಿಮಗೆಷ್ಟು ಗೊತ್ತು..?

suddionenews
2 Min Read

ಮೈಸೂರು: ಇಂದು ವಿಶ್ವ ವಿಖ್ಯಾತ ದಸರಾ ಕಾರ್ಯಕ್ರಮ ಬಹಳ ಅದ್ದೂರಿಯಿಂದ ಜರುಗುತ್ತಿದೆ. ಈ ಬಾರಿ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಅಭಿಮನ್ಯು ಹೊರಲಿದ್ದಾನೆ. ಅಭಿಮನ್ಯುಗೆ ಈಗ 58 ವರ್ಷ. ಅಭಿಮನ್ಯು ಜೊತೆಗೆ ಇತರೆ ಆನೆಗಳು ಕೂಡ ಹೆಜ್ಜೆ ಹಾಕಲಿವೆ. ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಅಭಿಮನ್ಯು ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದರೆ, ಅದರ ಹಿಂದೆ ಸಾಲಾಗಿ ಉಳಿದ ಆನೆಗಳು ಮಧುಮಕ್ಕಳಂತೆ ನಡೆಯುತ್ತವೆ‌.

 

ದಸರಾದಲ್ಲಿ ಒಟ್ಟು 14 ಆನೆಗಳು ದಸರಾದಲ್ಲಿ ಪಾಲ್ಗೊಳ್ಳಲಿಬೆ. ಆದರೆ 9 ಆನೆಗಳು ಮಾತ್ರ ಅಭಿಮನ್ಯು ಜೊತೆಗೆ ಸಾಥ್ ನೀಡಲಿವೆ. ಅದರಲ್ಲಿ ಅಭಿಮನ್ಯು ನೇತೃತ್ವ ವಹಿಸಲಿದ್ದು, ಲಕ್ಷ್ಮೀ, ಗೋಪೊ, ವರಲಕ್ಷ್ಮೀ, ಪ್ರಶಾಂತ, ಧನಂಜಯ, ಸುಗ್ರೀವ, ಭೀಮ, ದೊಡ್ಡ ಹರವೆ ಲಕ್ಷ್ಮೀ, ಕಂಜನ್, ಹಿರಣ್ಯ, ರೋಹಿತ, ಮಹೇಂದ್ರ ಹಾಗೂ ಏಕಲವ್ಯ ಹೆಜ್ಜೆ ಹಾಕಲಿದ್ದಾರೆ. ಈ ಏಕಲವ್ಯ ಹೊಸದಾಗಿ ಸೇರಿರುವ ಆನೆಯಾಗಿದೆ.

ಅಭಿಮನ್ಯು: ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. 2012ರಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದೆ. ಈ ಬಾತಿಯೂ ಅಂಬಾರಿ ಹೊರಲು ಅಭಿಮನ್ಯು ಸಿದ್ಧನಾಗಿದ್ದಾನೆ.

ಧನಂಜಯ: 2013ರಲ್ಲಿ ಹಾಸನ ಜಿಲ್ಲೆಯ ಯಳಸೂರು ವಲಯದಲ್ಲಿ ಸೆರೆ ಹಿಡಿಯಲಾಗಿತ್ತು. ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಧನಂಜಯ ಪಾಲ್ಗೊಳ್ಳುತ್ತಾ ಬಂದಿದ್ದಾನೆ. ಧನಂಜಯನಿಗೆ ಈಗ 44 ವರ್ಷ ವಯಸ್ಸು.

ಭೀಮ: 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಹೆತ್ತೂರಿನಲ್ಲಿ ಸೆರೆಹಿಡಿಯಲಾಗಿತ್ತು. ಭೀಮನಿಗೆ ಈಗಿನ್ನು 24ರ ಹರಯ. ಆದರೆ ಅಂಬಾರಿ ಹೊರುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾನೆ.

ಮಹೇಂದ್ರ: ಇವನಿಗೆ ಈಗ 41 ವರ್ಷ. ದಸರಾ ಅಂಬಾರಿ ಹೊರುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾನೆ. 2022ರ ಶ್ರೀರಂಗಪಟ್ಟಣದ ದಸರಾದಲ್ಲೂ ಭಾಗಿಯಾಗಿದ್ದ.

ಗೋಪಿ: 1990ರಲ್ಲಿ ಹಾಸನದ ದುಬಾರೆ ಬೆಟ್ಟದಲ್ಲಿ ಸೆರೆಹಿಡಿಯಲಾಯ್ತು. ಈಗ ಅವನಿಗೆ 42 ವರ್ಷ. 2015ರಲ್ಲಿ ಪಟ್ಟದ ಆನೆಯಾಗಿ ಅರಮನೆ ಪ್ರವೇಶ ಮಾಡಿದ್ದ.

ಕಂಜನ್: ದಿಬಾರೆ ಶಿಬಿರದಲ್ಲಿ ಬೆಳೆಯುತ್ತಿದ್ದಾನೆ. ಈಗ ಇವನಿಗೆ 25 ವರ್ಷ. ಕಳೆದ ಬಾರಿ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗಿದ್ದ.

ಲಕ್ಷ್ಮೀ: ಈಗ ಲಕ್ಷ್ಮೀಗೆ 53 ವರ್ಷ. ಅನೇಕ ಬಾರಿ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಳೆ.

ರೋಹಿತ್ ಗೆ 22 ವರ್ಷ, ಹಿರಣ್ಯಾಗೆ 47, ಪ್ರಶಾಂತಗೆ 5 ವರ್ಷ, ಸುಗ್ರೀವಗೆ 42 ವರ್ಷ, ವರಲಕ್ಷ್ಮೀಗೆ 68 ವರ್ಷ, ಏಕಲವ್ಯಗೆ 39 ವರ್ಷ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *