ಬೆಂಗಳೂರು; ರಾಜ್ಯದೆಲ್ಲೆಡೆ ಈಗಾಗಲೇ ಮಳೆ ಶುರುವಾಗಿದೆ. ಮುಂಗಾರು ಆರಂಭಕ್ಕೂ ಮೊದಲೇ ಮುಂಗಾರು ಶುರುವಾಗಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಡುಗು, ಮಿಂಚಿನ ಜೊತೆಗೆ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಅದರಲ್ಲೂ ಈ ನಾಲ್ಕೈದು ದಿನ ಬಹಳ ಮುಖ್ಯವಾಗಿ ಹೆದ್ದಾರಿಗಳಲ್ಲಿ ಮಳೆ ಸುರಿಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿಮ್ಮ ಗಮನಕ್ಕೂ ಬಂದಿರಬಹುದು. ಎಷ್ಟೋ ಸಲ ಒಂದು ಭಾಗದಲ್ಲಿ ಮಳೆ ಬಂದರೆ ಪಕ್ಕದ ರಸ್ತೆಯಲ್ಲಿಯೇ ಮಳೆ ಇರುವುದಿಲ್ಲ. ಇದು ಹಾಗೆ. ಕರ್ನಾಟಕದ ಅರ್ಧ ಭಾಗ ಅಂದರೆ ಬೆಂಗಳೂರು – ಹಾಸನ ಹೆದ್ದಾರಿ, ಬೆಂಗಳೂರು – ದಾವಣಗೆರೆ, ಶಿವಮೊಗ್ಗ – ಬೆಂಗಳೂರು ಹೈವೇ ಸೇರಿದಂತೆ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ತುಮಕೂರು, ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಹುಬ್ಬಳ್ಳಿಯಿಂದ ಕಾರಾವಾರ ಹೋಗುವ ಹೆದ್ದಾರಿ ಹಾಗೂ ಹಾಸನ – ಮಂಗಳೂರಿಗೆ ತೆರಳುವ ಹೆದ್ದಾರಿಗಳಲ್ಲಿ ಹೆಚ್ಚಿನ ಮಳೆ ಆಗುವ ಸಾಧ್ಯತೆ ಇದೆ. ಕೆಲವೆಡೆ ಬಿಸಿಲಿನ ದರ್ಶನವಾದರೂ ಸಹಿತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಅದರಲ್ಲೂ ಈ ಮಳೆಗೆ ಕೆಲವೆಡೆ ಗುಡ್ಡ ಕುಸಿತವಾಗುವಂತಹ ಸನ್ನಿವೇಶಗಳು ಕಾಣಿಸುತ್ತಿವೆ. ಹೀಗಾಗಿ ಇದು ವಾಹನ ಸವಾರರಿಗೆ, ಪ್ರವಾಸಕ್ಕೆಂದು ಈ ಸಮಯದಲ್ಲಿ ಹೋಗುವವರಿಗೆ ಎಚ್ಚರಿಕೆಯ ಸಂದೇಶ. ಕರ್ವ್ ಇರುವಂತ ಪ್ರದೇಶದಲ್ಲಿ ವಾಹನಗಳನ್ನು ಓಡಿಸುವಾಗ ತುಂಬಾನೇ ಎಚ್ಚರಿಕೆ ಇರಲಿ. ಗುಡ್ಡಗಳು ಈ ಮಳೆಯಿಂದಾಗಿ ಯಾವಾಗ, ಎಲ್ಲಿ ಕುಸಿಯುತ್ತದೆ ಗೊತ್ತಾಗಲ್ಲ.






