ವಿಜಯಪುರ: ಕಾಂಗ್ರೆಸ್ ಸರ್ಕಾರದಿಂದ ಬಜೆಟ್ ಮಂಡನೆ ಕೂಡ ಮುಗಿದಿದೆ. ಆದರೂ ಇನ್ನು ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಈ ಬಗ್ಗೆ ಸಚಿವ ಎಂಬಿ ಪಾಟೀಲ್ ಮಾತನಾಡಿದ್ದು, ಅವರಿಗೆ ಇನ್ನೆಷ್ಟು ಕೋಟಿ ಫಿಕ್ಸ್ ಮಾಡಿದ್ದಾರೋ ಎಂದು ಪ್ರಶ್ನಿಸಿದ್ದಾರೆ.
ಹಿಂದೆ ಸಿಎಂ ಪಟ್ಟಕ್ಕಾಗಿ 2,500 ಕೋಟಿ ಕೇಳಿದ್ದರಂತೆ. ವಿಪಕ್ಷ ನಾಯಕನಿಗೆ ನಾಯಕನಿಗೆ ಷ್ಟು ಕೋಟಿ ಫಿಕ್ಸ್ ಮಾಡಿದ್ದಾರೋ, ಏನೋ. ನೂರಾರು ಕೋಟಿ ಫಿಕ್ಸ್ ಮಾಡಿದ್ದಾರಾ ಯಾರಿಗೆ ಗೊತ್ತು..? ಬಿಜೆಪಿಯಲ್ಲಿ ಸಿಎಂಗೆ ಹಣ ನೀಡಬೇಕು ಎಂದು ಹೇಳಿದ್ದರು. ವಿರೋಧ ಪಕ್ಷ ನಾಯಕರುಗಳು ಸಹ ಫಿಕ್ಸ್ ಮಾಡಿದ್ದಾರೆ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್.
ಇದೆ ವೇಳೆ, ಬಡವರ ಪಾಲಿಗೆ ಕಾಂಗ್ರೆಸ್ ಕೈ ಕೊಟ್ಟಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಬಡವರ ಬಗ್ಗೆ ಪ್ರಹ್ಲಾದ್ ಜೋಶಿಗೆ ಗೊತ್ತಿಲ್ಲ. ಕೇಂದ್ರ ಸಚಿವ ಜೋಶಿಗೆ ಬಡವರ ಬಗ್ಗೆ ಏನು ಗೊತ್ತು..? ಕೇಂದ್ರ ಸಚಿವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಿ. ಹೊಟ್ಟೆ ಉರಿಯಿಂದ ಮಾತನಾಡಬೇಡಿ. ಐದು ಗ್ಯಾರಂಟಿಗಳನ್ನು ಕೊಟ್ಟಿರೋದು ಶ್ರೀಮಂತರಿಗಾ ಎಂದು ಪ್ರಶ್ನಿಸಿದ್ದಾರೆ.