ದಾವಣಗೆರೆ,ಜನವರಿ.07 : ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಕರಡು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಅಂತಿಮ ಮತದಾರರ ಪಟ್ಟಿಯನ್ನು ಮತಗಟ್ಟೆ ವಾರು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ.ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರ ಸೇರಿ 1693 ಮತಗಟ್ಟೆಗಳಿವೆ. ಈ ಎಲ್ಲಾ ಮತಗಟ್ಟೆಗಳಲ್ಲಿ 743888 ಪುರುಷ, 752813 ಮಹಿಳಾ ಹಾಗೂ 118 ಇತರೆ ಮತದಾರರು ಸೇರಿ 1496819 ಮತದಾರರಿದ್ದಾರೆ.
ಕ್ಷೇತ್ರವಾರು ಮತಗಟ್ಟೆ ವಿವರ:
ಜಗಳೂರು 263, ಹರಿಹರ 228, ದಾವಣಗೆರೆ ಉತ್ತರ ಕ್ಷೇತ್ರ 245, ದಾವಣಗೆರೆ ದಕ್ಷಿಣ ಕ್ಷೇತ್ರ 217, ಮಾಯಕೊಂಡ ಕ್ಷೇತ್ರ 240, ಚನ್ನಗಿರಿ ಕ್ಷೇತ್ರ 255 ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ 245 ಮತಗಟ್ಟೆ ಸೇರಿ 1693 ಮತಗಟ್ಟೆಗಳಿವೆ.
ಮತದಾರರ ವಿವರ :
ಜಗಳೂರು :
ಪುರುಷ-100634, ಮಹಿಳೆ-99534, ಇತರೆ-10, ಒಟ್ಟು-200178, ಹರಿಹರ, ಪುರುಷ-, ಮಹಿಳೆ-106767, ಇತರೆ-17, ಒಟ್ಟು-212327,
ದಾವಣಗೆರೆ ಉತ್ತರ :
ಪುರುಷ-125964, ಮಹಿಳೆ-130652, ಇತರೆ-36, ಒಟ್ಟು-256652,
ದಾವಣಗೆರೆ ದಕ್ಷಿಣ, ಪುರುಷ-111266, ಮಹಿಳೆ-114395, ಇತರೆ-38, ಒಟ್ಟು-225699,
ಮಾಯಕೊಂಡ, ಪುರುಷ-98063, ಮಹಿಳೆ-97794, ಇತರೆ-4, ಒಟ್ಟು-195861,
ಚನ್ನಗಿರಿ ಪುರುಷ-102105, ಮಹಿಳೆ-103051, ಇತರೆ-8, ಒಟ್ಟು-205164,
ಹೊನ್ನಾಳಿ ಪುರುಷ-100307, ಮಹಿಳೆ-100626, ಇತರೆ-5, ಒಟ್ಟು-200938 ಮತದಾರರಿದ್ದಾರೆ.
ಅಂತಿಮ ಮತದಾರರ ಪಟ್ಟಿಯನ್ನು ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಮಹಾನಗರ ಪಾಲಿಕೆಯಲ್ಲಿ ಪ್ರಕಟಿಸಲಾಗಿದೆ.
ಆನ್‍ಲೈನ್ https://voterportal.eci.gov.in or https://voters.eci.gov.in ನಲ್ಲಿ ಪರಿಶೀಲಿಸಿಕೊಳ್ಳಬಹುದು. ಮತ್ತು ಮತದಾರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ನಿರಂತರ ಪ್ರಕ್ರಿಯೆ ಯಾಗಿರುತ್ತದೆ. ವಿದೇಶಗಳಲ್ಲಿ ಉದ್ಯೋಗ, ಶಿಕ್ಷಣ ನಿಮಿತ್ತ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ನಮೂನೆ-6 ರಲ್ಲಿ ಅರ್ಜಿಯನ್ನು ಅಗತ್ಯ ದಾಖಲೆಯೊಂದಿಗೆ ಸಂಬಂಧಿಸಿದ ಮತದಾರರ ನೋಂದಾಧಿಕಾರಿಗಳಿಗೆ ಅಂಚೆ ಅಥವಾ ಆನ್‍ಲೈನ್ ಮೂಲಕ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.