ಶಿವಮೊಗ್ಗ: ಯುವನಿಧಿ ಕಾರ್ಯಕ್ರಮಕ್ಕೆ ನಮ್ಮ ಜಿಲ್ಲೆಯಲ್ಲಿಯೇ ಚಾಲನೆ ಕೊಡುವುದು ನಮಗೆ ಹೆಮ್ಮೆಯ ವಿಚಾರ. ನಾನು ಬಹಳ ಖುಷಿಯಿಂದಾನೇ ಕೇಳಿದೆ. ಸಿಎಂ ಕೂಡ ಥಟ್ ಅಂತ ಓಕೆ ಅಂದು ಬಿಟ್ಟರು. ಏನೇ ಕಾರ್ಯಕ್ರಮವಾದರೂ ಬಡವರ ಪರ ಮಾಡಿದಾಗ ಬಹಳ ಸಂತಸವಾಗುತ್ತದೆ. ಅದೊಂದು ಹೆಮ್ಮೆ. ಗೃಹಜ್ಯೋತಿ, ಗೃಹಲಕ್ಷ್ಮೀ ಸೇರಿದಂತೆ ಐದು ಯೋಜನೆಗಳು ಬಡವರಿಗೆ ಉಪಯೋಗವಾಗುತ್ತಿದೆ. ಈಗ ಎರಡು ಕೋಟಿ ಹೆಣ್ಣು ಮಕ್ಕಳು ಓಡಾಡುತ್ತಾರೆ ಎಂದಿದ್ದಾರೆ.
ಯುವಕರಿಗೆ ನಾನು ಈ ಮನವಿ ಮಾಡಯತ್ತೇನೆ. ದಯವಿಟ್ಟು ಧೈರ್ಯವಾಗಿರಿ. ನಾನು ಕಷ್ಟಪಟ್ಟು ಓದುತ್ತೇನೆ. ಆದರೆ ಕೆಲಸ ಸಿಗಲಿಲ್ಲ. ಅಪ್ಪನ ಜೇಬು ನೋಡಬೇಕು, ಮನೆ ಜವಬ್ದಾರಿ ಅಂತೆಲ್ಲಾ ಯೋಚಿಸುವ ಯುವಕರಿಗೆ ಸಿದ್ದರಾಮಯ್ಯ ಅವರು, ಯುವನಿಧಿ ಯೋಜನೆ ತಂದಿದ್ದಾರೆ. ಆ ಯೋಜನೆಗೆ ಶಿವಮೊಗ್ಗದಲ್ಲಿ ಚಾಲನೆ ನೀಡುವುದು ಒಳ್ಳೆಯ ನಿರ್ಧಾರ. ಯಾಕಂದ್ರೆ ಇದು ಹೋರಾಗಾರರ ಜಿಲ್ಲೆ.
ಮೊದಲು 50-60 ಸಾವಿರ ಜನ ಸೇರಿಸಿ ಮಾಡೋಣಾ ಅಂತ ಇತ್ತು. ಆದರೆ ನಾನು ಹೇಳಿದೆ ತುಂಬಾ ಜನರನ್ನು ಸೇರಿಸಿ ಮಾಡೋಣಾ. ಇಡೀ ರಾಜ್ಯದಿಂದ ಯುವಕರು ಬರಲಿ, ಅವರಿಗೆ ಒಂದು ಸಂದೇಶ ಹೋಗಲಿ. ದೊಡ್ಡ ಮಟ್ಟದಲ್ಲಿ ಹೋಗುವುದರಿಂದ ಯೋಜನೆಗೆ ಸಾರ್ಥಕತೆ ಸಿಗಲಿದೆ. ಮಾಹಿತಿ ಪ್ರಕಾರ 25 ಸಾವಿರ ನೊಂದಣಿಯಾಗಿದೆ ಅಂದರೆ ಇನ್ನು ಜಾಸ್ತಿಯಾಗಬೇಕು. ಅದಕ್ಕೊಂದು ವ್ಯವಸ್ಥೆಯಾಗಬೇಕು. ಯುವಕರಿಗೋಸ್ಕರ ಈ ಕಾರ್ಯಕ್ರಮಕ್ಕೆ ಬಂದು ಹೋಗೊ. ನೀವೂ ಮತ ಹಾಕಿದ್ದೀರಿ. ಅದರ ಸಹಕಾರ ಸಿಗಬೇಕು ಎಂದರೆ ಎಲ್ಲರೂ ಕಾರ್ಯಕ್ರಮಕ್ಕೆ ಬನ್ನಿ.
ವಿವೇಕಾನಂದ ಅವರ ಜಯಂತಿಯ ದಿನ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಯುವಕರಿಗೆ ಆ ಜಯಂತಿಯ ದಿನ ಬಹಳ ಒಳ್ಳೆಯದು. ಕಾರ್ಯಕ್ರಮ ತುಂಬಾ ಚೆನ್ನಾಗಿ ಆಗಲಿದೆ ಎಂದಿದ್ದಾರೆ.