ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಟ ವಿಶಾಲ್ ಅವರ ಪರಿಸ್ಥಿತಿ ಕಂಡು ಫ್ಯಾನ್ಸ್ ಅಷ್ಟೇ ಅಲ್ಲ ಎಲ್ಲರೂ ಶಾಕ್ ಆಗಿದ್ದಾರೆ. ಅಷ್ಟು ಕಟ್ಟು ಮಸ್ತಾಗಿದ್ದ ನಟನಿಗೆ ನಡೆಯುವುದಕ್ಕೂ ಆಗ್ತಿಲ್ಲ, ಮೈಕ್ ಹಿಡಿಯಲು ತ್ರಾಣವಿಲ್ಲ, ಮಾತನಾಡಲು ಆಗುತ್ತಿಲ್ಲ. ಕೈ ನಡುಗುತ್ತಿದೆ, ಕಣ್ಣಲ್ಲಿ ನೀರು ಬರುತ್ತಿದೆ. ವಿಶಾಲ್ ಗೆ ಏನಾಯ್ತು ಎಂದು ಎಲ್ಲರೂ ತಲೆಕೆಡಿಸಿಕೊಂಡಿರುವಾಗ, ವೈರಲ್ ಫೀವರ್ ನಿಂದ ಈ ರೀತಿ ಆಗಿದ್ದಾರೆ ಎಂಬ ಮಾತುಗಳು ಬಂದಿತ್ತು. ಆದರೆ ಅದನ್ನ್ಯಾರು ನಂಬುವುದಕ್ಕೆ ಸಿದ್ಧವಿಲ್ಲ. ಇದೀಗ ವಿಶಾಲ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು, ವೈದ್ಯರು ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದಾರೆ.
ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ವಿಶಾಲ್ ಈಗ ಹೇಗಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ವಿಶಾಲ್ ವೈರಲ್ ಫೀವರ್ ಜ್ಚರದಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ಕೂಡ ನೀಡುತ್ತಿದ್ದೇವೆ. ಅವರಿಗೆ ಸಂಪೂರ್ಣವಾಗಿ ಬೆಡ್ ರೆಸ್ಟ್ ಅಗತ್ಯವಿದೆ. ಹೀಗಾಗಿ ಸಂಪೂರ್ಣ ವಿಶ್ರಾಂತಿ ಬೇಕಾಗಿದೆ ಎಂದು ಅಪೋಲೋ ವೈದ್ಯರು ತಿಳಿಸಿದ್ದಾರೆ. ನೆಚ್ಚಿನ ನಟನ ಪರಿಸ್ಥಿತಿ ಕಂಡು ಫ್ಯಾನ್ಸ್ ಕಂಗಾಲಾಗಿದ್ದಾರೆ. ಆದಷ್ಟು ಬೇಗ ಗುಣಮುಖರಾಗಕಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ದೇವರಿಗೆ ವಿಶೇಷ ಪೂಜೆಯನ್ನು ಮಾಡುತ್ತಿದ್ದಾರೆ.
ವಿಶಾಲ್ ಅಭಿನಯದ ಮದಗಜ ರಾಜ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸಂಕ್ರಾಂತಿ ಹಬ್ಬಕ್ಕೆ ವಿಶೇಷವಾಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಆದರೆ ಈ ಸಿನಿಮಾ12 ವರ್ಷಗಳ ಹಿಂದೆ ಶೂಟ್ ಆಗಿರುವಂತ ಸಿನಿಮಾವಾಗಿದೆ. ಹೀಗಾಗಿ ವಿಶಾಲ್ ಅವರನ್ನು ತೆರೆ ಮೇಲೆ ಮತ್ತೆ ಅದೇ ಲುಕ್ ನಲ್ಲಿ ನೋಡುವುದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಸಿನಿಮಾ ಪ್ರಚಾರಕ್ಕೆ ಬಂದಿದ್ದಾಗಲೇ ವಿಶಾಲ್ ಈಗಿನ ಪರಿಸ್ಥಿತಿ ಎಲ್ಲರಿಗೂ ಅರ್ಥವಾಗಿದ್ದು.